More

    ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!

    ನವದೆಹಲಿ: ಐಪಿಎಲ್​ನ 17ನೇ ಆವೃತ್ತಿಯ ಮುಂಬರುವ ಪ್ರತಿಯೊಂದು ಪಂದ್ಯಗಳ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿದ್ದು, ಆಯಾ ತಂಡಗಳ ಗೆಲುವು ಅವರ ಪ್ಲೇ-ಆಫ್ ಭವಿಷ್ಯವನ್ನು ನಿರ್ಧರಿಸುತ್ತದೆ. ಸದ್ಯ ಇದು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಇದೀಗ ಬಂದಿರುವ ಮಾಹಿತಿ ಪ್ರಕಾರ, ನಿನ್ನೆಯ (ಮೇ.08) ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ​ ಸನ್​ರೈಸರ್ಸ್​ ಹೈದರಾಬಾದ್​ ರೋಚಕ ಗೆಲುವು ಸಾಧಿಸಿತು. ಆದ್ರೆ, ಅವರ ಗೆಲುವು ಈಗ ಮುಂಬೈ ಇಂಡಿಯನ್ಸ್​ ಪ್ಲೇ-ಆಫ್​​ ಕನಸನ್ನು ಛಿದ್ರಗೊಳಿಸಿದೆ.

    ಇದನ್ನೂ ಓದಿ: ಹಸಿರಿದ್ದರೆ ಮಾತ್ರ ಉಸಿರು ವಿಶ್ವ ರೆಡ್‌ಕ್ರಾಸ್ ದಿನಾಚರಣೆಯಲ್ಲಿ ಮಾಧವ ಉಳ್ಳಾಲ ಅಭಿಮತ

    ಇಲ್ಲಿಯವರೆಗೆ ಆಡಿರುವ 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳನ್ನು ಮಾತ್ರ ಗೆದ್ದಿರುವ ಎಂಐ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ, ಕಳೆದ ಪಂದ್ಯದಲ್ಲಿ ಎಸ್​ಆರ್​ಎಚ್​ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಲೀಗ್​ನ ಪ್ರಾರಂಭದಿಂದಲೂ ಮುಂಬೈ ಅಭಿಮಾನಿಗಳ ಛೀಮಾರಿ, ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪಾಂಡ್ಯ, ಪಂದ್ಯ ಗೆದ್ದ ಬಳಿಕ ಮಾತನಾಡಿದ್ದು, ಶಾಕಿಂಗ್ ರೀತಿ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

    ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಸ್ಥಾನದಿಂದ ರೋಹಿತ್​ ಶರ್ಮಾರನ್ನು ಕೆಳಗಿಳಿಸಿ, ಸ್ಥಾನ ಪಡೆದ ಹಾರ್ದಿಕ್​​ ನಿರ್ಧಾರವನ್ನು ಎಂಐ ಫ್ಯಾನ್ಸ್​ ಕಿಂಚಿತ್ತು ಒಪ್ಪಲಿಲ್ಲ. ಅಂದಿನಿಂದಲೂ ಇಂದಿನವರೆಗೆ ಹಾರ್ದಿಕ್​ ಪರ ಫ್ಯಾನ್ಸ್​ ಒಗ್ಗಟಿನಿಂದ ನಿಂತಿಲ್ಲ. ಇದೆಲ್ಲದರ ಬೆನ್ನಲ್ಲೇ ಅನುಭವದ ಬಗ್ಗೆ ಮಾತನಾಡಿದ ಪಾಂಡ್ಯ, “ನಾನು ಸದಾ ದೊಡ್ಡದಾಗಿ ಯೋಚಿಸುತ್ತೇನೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮುಂಚೂಣಿಯಲ್ಲಿರುತ್ತೇನೆ. ನಮ್ಮ ತಪ್ಪುಗಳಿಂದ ಆಗುವ ಅನುಭವದ ಮುಂದೆ, ಯಾರು ಹೇಳಿಕೊಡುವ ಪಾಠ ಅಷ್ಟು ದೊಡ್ಡದಾಗಿರಲ್ಲ” ಎಂದಿದ್ದಾರೆ.

    ಇದನ್ನೂ ಓದಿ: ಎಚ್​.ಡಿ. ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್ ವಾದ; ನ್ಯಾಯಾಲಯದಲ್ಲಿ ಹೇಳಿದ್ದಿಷ್ಟು

    “ನಾನು ತಪ್ಪುಗಳನ್ನು ಮಾಡಿದಾಗ ಅದರಿಂದ ಕಲಿತು ಮುನ್ನುಗ್ಗುವುದನ್ನು ಎದುರುನೋಡುತ್ತೇನೆ. ಸೋತು, ಕಲಿಯುವುದು ನನಗೆ ಇಷ್ಟ. ನಮ್ಮ ಅನುಭವ ಕಲಿಸಿಕೊಡುವ ರೀತಿ ಬೇರೆ ಯಾರೂ ಕಲಿಸಿಕೊಡಲು ಸಾಧ್ಯವಿಲ್ಲ. ಅದು ನಮ್ಮ ಅತ್ಯಾಪ್ತರೇ ಇರಲಿ ಅಥವಾ ಮಾಹಿ ಬಾಯ್ (ಮಹೇಂದ್ರ ಸಿಂಗ್ ಧೋನಿ)​ ಆಗಿರಲಿ ಎಂದು ಹಾರ್ದಿಕ್​ ಪಾಂಡ್ಯ ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆಯನ್ನು ಗಮನಿಸಿದ ಅನೇಕರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್). 

    ಆರ್​ಸಿಬಿ ಗೆದ್ರೆ ಖುಷಿಪಡಿ, ಸೋತರೆ ಮಾತ್ರ… ಕ್ರಿಕೆಟ್ ಫ್ಯಾನ್ಸ್ ಮಾಡಿಕೊಂಡ ಮನವಿ ಇದು!

    ಎಚ್​.ಡಿ. ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್ ವಾದ; ನ್ಯಾಯಾಲಯದಲ್ಲಿ ಹೇಳಿದ್ದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts