ಎಚ್​.ಡಿ. ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್ ವಾದ; ನ್ಯಾಯಾಲಯದಲ್ಲಿ ಹೇಳಿದ್ದಿಷ್ಟು

WhatsApp Image 2024-05-09 at 4.24.25 PM
Published on

ಬೆಂಗಳೂರು: ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ನಡೆಯುತ್ತಿದ್ದು, ವಾದ-ಪ್ರತಿವಾದ ಆಲಿಸಲಾಗುತ್ತಿದೆ.

ಒಂದೆಡೆ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಅವರ ಜಾಮೀನು ವಿಚಾರ ಕೋರ್ಟ್​ನಲ್ಲಿ ನಡೆಯುತ್ತಿದೆ. ಇನ್ನು ರೇವಣ್ಣ ಪರ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವ ಹಿರಿಯ ವಕೀಲ ಸಿ.ವಿ. ನಾಗೇಶ್, 5 ದಿನವಾದರೂ ಏಕೆ ಮಹಿಳೆಯ ಹೇಳಿಕೆ ಪಡೆದಿಲ್ಲ. ಅಪಹರಣವಾಗಿದ್ದಾರೆ ಎಂದು ಹೇಳಲಾದ ಮಹಿಳೆ ಇಂದು ಆರೋಗ್ಯವಾಗಿ ಪತ್ತೆ ಎಂದು ವಾದಿಸಿದ್ದಾರೆ.

ಈ ಕೇಸ್ ದಾಖಲಿಸಿರುವುದೇ ಕಾನೂನುಬಾಹಿರ. ಏ.29ರಿಂದ ಮೇ 5 ರವರೆಗೆ ಆಕೆಗೆ ತೊಂದರೆಯಾಗಿಲ್ಲ. ನಿನ್ನೆಯಿಂದ ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ, ಅದು ಅನಗತ್ಯ. ಈ ಸೆಕ್ಷನ್​ಗಳು ರೇವಣ್ಣ ಅವರಿಗೆ ಅನ್ವಯವಾಗುವುದಿಲ್ಲ. ಮಹಿಳೆಯನ್ನು ಕರೆದೊಯ್ದು ವಾಹನಗಳನ್ನು ಪತ್ತೆಹಚ್ಚಬೇಕು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ರೇವಣ್ಣ ಪರ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net