More

    ಆತನಿಗೆ ಯಾವಾಗ, ಹೇಗೆ ಆಡಬೇಕು ಅನ್ನೋದೆ ಗೊತ್ತಿಲ್ಲ! ಸ್ಟಾರ್​ ಬ್ಯಾಟ್ಸ್​ಮನ್​ ವಿರುದ್ಧ ಬಜ್ಜಿ ಗರಂ

    ಮುಂಬೈ: ನಿನ್ನೆ (ಮೇ.06) ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 7 ವಿಕೆಟ್​ಗಳ ಅಂತರದಿಂದ ಮುಂಬೈ ಈ ಮ್ಯಾಚ್​ ಅನ್ನು ವಶಪಡಿಸಿಕೊಂಡಿತು. ಈ ಗೆಲುವಿನ ಮೂಲಕ ಎಸ್​ಆರ್​ಎಚ್​ ಕ್ಯಾಪ್ಟನ್​ ಪ್ಯಾಟ್​ ಕಮಿನ್ಸ್​ಗೆ ಭಾರೀ ಮುಖಭಂಗ ಉಂಟುಮಾಡಿದ ಎಂಐ, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

    ಇದನ್ನೂ ಓದಿ: ಗೀತಾ ಸೋಲೋದು ಖಚಿತ! ನಟ ಶಿವರಾಜ್​ ಕುಮಾರ್ ಹೇಳಿಕೆ​ಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ

    ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್​, ಸನ್​ರೈಸರ್ಸ್​​ಗೆ​ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಈ ವೇಳೆ ಆರಂಭಿಕ ಹಂತದಲ್ಲೇ ಎಡವಿದ ಓಪನಿಂಗ್​ ಬ್ಯಾಟ್ಸ್​ಮನ್​ಗಳಾದ ಅಭಿಷೇಕ್ ಶರ್ಮಾ ಕೇವಲ 11 ರನ್​ಗೆ ಔಟ್ ಆಗಿ ಪೆವಿಲಿಯನ್​ ಹಾದಿ ಹಿಡಿದರು. ಅವರ ಬೆನ್ನಲ್ಲೇ ಹೆನ್ರಿಕ್ ಕ್ಲಾಸೆನ್ (2) ರನ್​ಗೆ ವಿಕೆಟ್ ಕಳೆದುಕೊಂಡರು. ಈ ಮೂಲಕ ಎಸ್​ಆರ್​ಎಚ್​ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 173 ರನ್​ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು.

    ಸದ್ಯ ಎಸ್​ಆರ್​ಎಚ್ ತಂಡದ ಬ್ಯಾಟ್ಸ್​ಮನ್​ಗಳು ಅಬ್ಬರಿಸದೆ, ಬ್ಯಾಟಿಂಗ್ ಕೊಡುಗೆ ಕೊಡುವಲ್ಲಿ ವಿಫಲರಾಗಿದ್ದನ್ನು ಗಮನಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್, ಕ್ರೀಸ್​ಗೆ ಬಂದ ಬಳಿಕ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೆನ್ರಿಕ್ ಕ್ಲಾಸೆನ್ ಬ್ಯಾಟ್​ ಮಾಡಬೇಕಿತ್ತು. ಆದರೆ ಅವರು ಆ ಆಟವನ್ನು ಪ್ರದರ್ಶಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಮೂವತ್ತು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆ   17,09,244 ಮತದಾರರು 

    “ಕ್ಲಾಸೆನ್​ಗೆ ಪರಿಸ್ಥಿತಿಗೆ ತಕ್ಕಂತೆ ಆಡಲು ಬರುವುದಿಲ್ಲ ಎಂಬುದು ಈ ಪಂದ್ಯದಿಂದಲೇ ತಿಳಿಯುತ್ತದೆ. ತಂಡಕ್ಕೆ ತಮ್ಮ ಅವಶ್ಯಕತೆ, ಸ್ಪೋಟಕ ಬ್ಯಾಟಿಂಗ್ ಅಗತ್ಯ ಎಷ್ಟಿರುತ್ತದೆ ಎಂಬುದನ್ನು ಅರಿಯಬೇಕಿತ್ತು. ಈ ರೀತಿ ಬ್ಯಾಟಿಂಗ್​ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ರೆ, ಅದು ಇಡೀ ತಂಡಕ್ಕೆ ದೊಡ್ಡ ಹೊಡೆತವಾಗುತ್ತದೆ. ಅಬ್ಬರದ ಬ್ಯಾಟಿಂಗ್ ಮಾಡಿ, ಕಡೆಯ ಓವರ್​ವರೆಗೂ ನಿಂತಿದ್ರೆ, ಖಂಡಿತ ಸನ್​ರೈಸರ್ಸ್​ 190ಕ್ಕೂ ಅಧಿಕ ರನ್​ಗಳ ಟಾರ್ಗೆಟ್​ ಸೆಟ್ ಮಾಡಲು ಸಾಧ್ಯವಾಗುತ್ತಿತ್ತು” ಎಂದಿದ್ದಾರೆ,(ಏಜೆನ್ಸೀಸ್).

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಗೀತಾ ಸೋಲೋದು ಖಚಿತ! ನಟ ಶಿವರಾಜ್​ ಕುಮಾರ್ ಹೇಳಿಕೆ​ಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts