ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

Tejaswisurya in wb
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಯುವ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿದ್ದರು. ನಾಲ್ಕು ಕಡೆಗಳಿಂದ ರ‍್ಯಾಲಿ ಸೆಕ್ರಟೇರಿಯೆಟ್ ಕಡೆಗೆ ಹೋಗುತ್ತಿದ್ದ ವೇಳೆ ಒಂದು ಕಡೆ ನಾಡ ಬಾಂಬ್​ ದಾಳಿ ನಡೆದಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಫ್ಯಾಸಿಸಂ ಅನ್ನೋದು ಹೀಗೆ ವ್ಯಕ್ತವಾಗುತ್ತೆ!, ರೂಫ್​ಟಾಪ್ ಮೇಲಿಂದ ನಮ್ಮ ರ‍್ಯಾಲಿಯ ಮೇಲೆ ನಾಡ ಬಾಂಬ್ ದಾಳಿ ನಡೆಸಲಾಗಿದೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅಶ್ರುವಾಯು, ಲಾಠಿ ಪ್ರಹಾರವನ್ನೂ, ಜಲ ಪ್ರಹಾರವನ್ನೂ ನಡೆಸಲಾಗಿದೆ. ನಿರಂಕುಶಾಧಿಕಾರಿಯ ಅಂತ್ಯ ಕಾಲ ಸಮೀಪಿಸುತ್ತಿದೆ ಎಂದು ರ‍್ಯಾಲಿಯ ಫೋಟೋಗಳನ್ನು ಅವರು ಟ್ವೀಟ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದಲ್ಲದೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಸುಮ್ನೇ ಬರಲ್ಲ, ಅದಕ್ಕೆ ಯಾರಾದರೂ ಬೆಲೆ ಕೊಡಲೇಬೇಕಾಗುತ್ತದೆ. ಬಂಗಾಳದ ನಾಳಿನ ಯುವಜನರು ಇಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ತೆತ್ತಿರುವ ಬೆಲೆಯನ್ನು ಸ್ಮರಿಸಲಿದ್ದಾರೆ ಎಂದು ಟ್ವೀಟ್ ಮಾಡಿ, ಲಾಠಿ ಏಟು ತಿಂದವರ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net