ರೇಪ್​ ಮಾಡಲು ಮುಂದಾದ ಅಪ್ಪ! ಕೊಂದು ಅಮ್ಮನೊಂದಿಗೆ ಮಲಗಿದ ಮಗಳು

rajasthan
Published on

ಜೈಪುರ: ಮಗಳನ್ನು ಪ್ರೀತಿಯಿಂದ ಸಾಕಬೇಕಿದ್ದ ತಂದೆಯೇ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾದ ಘಟನೆ ರಾಜಸ್ಥಾದ ಜಲಂಧರ್​ನಲ್ಲಿ ನಡೆದಿದೆ. ಸಿಟ್ಟಿಗೆದ್ದ ಮಗಳು ತಂದೆಯನ್ನು ಕೊಲೆ ಮಾಡಿ, ಅಮ್ಮನ ಬಳಿ ಹೋಗಿ ಮಲಗಿದ್ದಾಗಿ ಹೇಳಲಾಗಿದೆ.

ಜಲಂಧರ್​ನ ಬಿರಾನಿ ಗ್ರಾಮದಲ್ಲಿ ಇಂತದ್ದೊಂದು ದುರ್ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿದ್ದ ತಂದೆ ಸೋಮವಾರ ರಾತ್ರಿ ಬಂದು ಮಗಳ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ. ಆಕೆ ಕೂಗಾಡದಂತೆ ಬಾಯಿ ಒತ್ತಿ ಹಿಡಿದಿದ್ದಾನೆ. ತಪ್ಪಿಸಿಕೊಳ್ಳಲು ಒದ್ದಾಡಿದ ಆಕೆ ಕೈಗೆ ಸಿಕ್ಕ ವಸ್ತುವಲ್ಲಿ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಆತ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ತಂದೆಯಿಂದ ತಪ್ಪಿಸಿಕೊಂಡ ಮಗಳು ನಂತರ ತನ್ನ ತಾಯಿ ಮಲಗಿದ್ದ ಸ್ಥಳಕ್ಕೆ ಹೋಗಿ ಮಲಗಿದ್ದಾಳೆ. ಬೆಳಗ್ಗೆ ಎದ್ದ ತಾಯೊಗೆ ವಿಚಾರ ಗೊತ್ತಾಗಿದ್ದು, ಈ ವಿಚಾರದಲ್ಲಿ ಪೊಲೀಸ್​ ಪ್ರಕರಣವೂ ದಾಖಲಾಗಿದೆ. ಸದ್ಯ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net