

ವಾಷಿಂಗ್ಟನ್: ಗೋಮೂತ್ರ ಸೇವನೆ ಬಗ್ಗೆ ಕೇಳಿರುತ್ತೀರಿ. ಆದರೆ ಅವರ ಮೂತ್ರವನ್ನು ಅವರೇ ಸೇವಿಸುವುದೆಂದರೆ? ಹೌದು ಈ ರೀತಿಯ ವಿಚಿತ್ರ ಪ್ರಯತ್ನಗಳನ್ನು ಮಾಡುವವರೂ ನಮ್ಮಲ್ಲಿದ್ದಾರೆ. ಇಲ್ಲೊಬ್ಬ ಮಹಿಳೆ ಇದೇ ರೀತಿಯ ವಿಚಿತ್ರ ಪ್ರಯತ್ನ ಮಾಡಿದ್ದು, ಅದರಿಂದಲೇ ನಾನು ತೂಕ ಇಳಿಸಿಕೊಂಡಿದ್ದಾಗಿಯೂ ಹೇಳಿದ್ದಾಳೆ.
ಅಮೆರಿಕದ 32 ವರ್ಷದ ಗ್ರೇಸ್ ಜೋನ್ಸ್ ಹೆಸರಿನ ಮಹಿಳೆ ಈ ರೀತಿ ಪ್ರಯತ್ನ ಮಾಡಿದವಳು. ಆಕೆ ಕಳೆದ ಮೂರು ತಿಂಗಳಿಂದ ಯುರೈನ್ ಥೆರಫಿ ಮಾಡುತ್ತಿದ್ದಾಳಂತೆ. ಭಾರೀ ತೂಕವಿರುವ ಆಕೆ ತೂಕವನ್ನು ಇಳಿಸುವ ಕಾರಣಕ್ಕೆ ಈ ಥೆರಪಿಯನ್ನು ಆರಂಭಿಸಿದ್ದಾಳೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತನ್ನ ಮೂತ್ರವನ್ನು ತಾನೇ ಕುಡಿಯುತ್ತಾಳೆ. ಅದಾದ ನಂತರ ಅದನ್ನು ತನ್ನ ಮುಖ ಮತ್ತು ಕೂದಲಿಗೂ ಹಚ್ಚಿಕೊಳ್ತಾಳೆ.
ಅಂದ ಹಾಗೆ ಈ ಥೆರಪಿ ಆರಂಭಿಸಿದಾಗಿನಿಂದ ಆಕೆಯ ತೂಕ ಸಾಕಷ್ಟು ಇಳಿದಿದೆಯಂತೆ. ಹಾಗೆಯೇ ಕಣ್ಣಿನ ದೃಷ್ಠಿಯೂ ಹೆಚ್ಚಾಗಿದೆ. ಮುಖದ ಕಾಂತಿಯೂ ಹೆಚ್ಚಿದೆ. ಹೈ ಬಿಪಿ ಇದ್ದ ಮಹಿಳೆ ಇದೀಗ ಬಿಪಿ ನಾರ್ಮಲ್ ಆಗಿದೆ ಎಂದೂ ಹೇಳಿಕೊಂಡಿದ್ದಾಳೆ.
ಅಮೆರಿಕದ ಮಹಿಳೆ ಪಾಲಿಸುತ್ತಿರುವ ಈ ಯುರೈನ್ ಥೆರಪಿಯಿಂದ ರೋಗ ಗುಣವಾಗುತ್ತದೆಯೆಂದಾಗಲೀ ಅಥವಾ ಆರೋಗ್ಯ ವೃದ್ಧಿಯಾಗುತ್ತದೆಯೆಂದು ಎಲ್ಲಿಯೂ ಉಲ್ಲೇಖವಿಲ್ಲ. (ಏಜೆನ್ಸೀಸ್)