More

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ಬೆಂಗಳೂರು: ಕರೊನಾದ ಎರಡನೇ ಅಲೆಗಿಂತ ಮೂರನೇ ಅಲೆ ಹೆಚ್ಚು ಭೀಕರವಾಗಿದೆ. ಮೂರನೇ ಅಲೆಯೂ ಬರುವ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ. ಈ ನಡುವೆ ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ಆತಂಕಕಾರಿ‌ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಕರೊನಾದ ಮೂರನೇ ಅಲೆ ಈಗಾಗಲೇ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದೆ. ತೈವಾನ್, ಬ್ರೆಜಿಲ್, ಸಿಂಗಾಪುರ, ಅಮೆರಿಕಾದ ಟೆಕ್ಸಾಸ್ ಅಷ್ಟೇ ಏಕೆ ಭಾರತದ ಮಹಾರಾಷ್ಟ್ರದಲ್ಲೂ ಅದರ ಸುಳಿವು ಸಿಕ್ಕಿದೆ. ಬಿ.1.617 ಹೆಸರಿನ ಭಾರತದ ಥಳಿ ವೈರಸ್ ಈ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ.

    ಈಗಾಗಲೇ ವಿದೇಶಗಳಲ್ಲಿ ಮೂರನೇ ಅಲೆಯ ಆರ್ಭಟ ಆರಂಭವಾಗಿದೆ. ಬ್ರೆಜಿಲ್​ನ ಸವಾಪಲೋದಲ್ಲಿ 2,600 ಮಕ್ಕಳ ಸಾವಾಗಿದೆ. ಕೋವಿಡ್ ಪಾಸಿಟಿವ್ ಇರುವ ಮಕ್ಕಳ ಅಂಗಾಂಗ ವೈಫಲ್ಯ ಆಗಿರುವ ಉದಾಹರಣೆಗಳೂ ಇವೆ. ಮಕ್ಕಳಲ್ಲಿ ಕಾಣಿಸಿಕೊಂಡ ವೈರಸ್ ಇಂಡಿಯಾ ವೈರಸ್ ಎಂದೇ ವರದಿ ಆಗಿದೆ. ಬ್ರೆಜಿಲ್ ಹಾಗೂ ಸಿಂಗಾಪುರದಲ್ಲಿ ಆತಂಕಕಾರಿ ರೂಪದಲ್ಲಿ ಸೋಂಕು ಹರಡುತ್ತಿದೆ. ಅದೇ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ನಾಳೆಯಿಂದ ಶಾಲೆ ಬಂದ್ ಮಾಡಿದ್ದಾರೆ. ಬ್ರೆಜಿಲ್​ನಲ್ಲಿ ಒಂಬತ್ತು ವರ್ಷಗಳ ಒಳಗಿನ ಮಕ್ಕಳಿಗೆ ಸೋಮಕು ಕಾಣಿಸಿಕೊಂಡಿದೆ. ಐದು ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಸಾವು ಆಗುತ್ತಿದೆ. ಕಾರ್ಡಿಯಾಕ್, ಡಯಾಬಿಟಿಸ್, ಲಂಗ್ಸ್ ಖಾಯಿಲೆ ಇರುವ ಮಕ್ಕಳು ಬೇಗ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ವಿದೇಶದಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಇದಕ್ಕೆ ಪರಿಹಾರ ಮಕ್ಕಳನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವುದು. ಕೇಂದ್ರ ಸರ್ಕಾರ ಮಕ್ಕಳ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ಮಾಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಬೆಡ್ ಕಂಪಲ್ಸರಿ ಮಾಡಬೇಕು. ಮೆಡಿಸಿನ್ ಅವಶ್ಯಕತೆ ಇದ್ದರೆ ಬೇರೆ ದೇಶದಿಂದ ತರಿಸಿಕೊಳ್ಳಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

    ಈಗಾಗಲೇ ನಮ್ಮ ದೇಶದಲ್ಲೀ ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಈಗಿರುವುದು ಬೇಸಿಕ್ ಕರೊನ ವೈರಸ್ ಅಷ್ಟೇ. ವಿದೇಶಗಳಲ್ಲಿರುವ ವೈರಸ್​ ಬಗ್ಗೆ ಮಾಹಿತಿ ಪಡೆಯಲು ತಜ್ಞರ ತಂಡವನ್ನು ವಿದೇಶಕ್ಕೆ ಕಳುಹಿಸಬೇಕು. ಮೂರು ದಿನಗಳ ತರಬೇತಿ ಆದರೂ ಪಡೆದು ಬಂದರೆ ಉತ್ತಮ.

    ವೈರಸ್​ಗೆ ಲಾಕ್​ಡೌನ್​ ಒಂದು ಪರಿಹಾರವಲ್ಲ. ವೈರಸ್ ಸಂಪೂರ್ಣ ನಿರ್ಮೂಲನೆ ಇದರಿಂದ ಸಾದ್ಯವಿಲ್ಲ. ಒಂದೊಂದು ದೇಶದಲ್ಲಿ ವೈರಸ್ ವಿಭಿನ್ನವಾಗಿದೆ. ಇದೆಲ್ಲದಕ್ಕೂ ಪರಿಹಾರ ವಾಕ್ಸಿನೇಷನ್ ಪ್ರತಿಯೊಬ್ಬರು ಪಡೆದುಕೊಳ್ಳುವುದು. ಜನರು, ಮಕ್ಕಳಿಗೆ ಏನು ಆಗೋದಿಲ್ಲ ಎನ್ನುವುದು ಮೂರ್ಖತನವನ್ನು ಬಿಡಬೇಕು. ಹೋಮ್ ಐಸೋಲೇಷನ್ ಇದ್ದಾಗ ಮಕ್ಕಳ ಜತೆ ಇರಬೇಡಿ. ಅವರನ್ನು ಪಾರ್ಕ್​ಗಳಿಗೆ ಕಳುಹಿಸಬೇಡಿ. ಎರಡನೇ ಅಲೆಯಲ್ಲಿ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದೇವೆ. ಮಕ್ಕಳ‌ ಮೇಲೆ ಆಗುವ ತೊಂದರೆಯಿಂದ ಪೋಷಕರು ನೋವು ಅನುಭವಿಸುವ ಪರಿಸ್ಥಿತಿ ಬಂದೊದಗುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.

    ಶಾಸಕ ರೇಣುಕಾಚಾರ್ಯರ ಸಮಯಪ್ರಜ್ಞೆಯಿಂದ ತಪ್ಪಿದ ಆಕ್ಸಿಜನ್‌ ಕೊರತೆ ದುರಂತ; ಉಳಿಯಿತು 40 ಸೋಂಕಿತರ ಪ್ರಾಣ

    ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಕರೊನಾಕ್ಕೆ ಬಲಿಯಾದ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts