More

    ಕರೊನಾ ವಿಚಾರದಲ್ಲಿ ನಿರ್ಲಕ್ಷ÷್ಯ ಬೇಡ: ಶಾಸಕ ಗೋಪಾಲಕೃಷ್ಣ ಬೇಳೂರು

    ಹೊಸನಗರ: ಕರೊನಾ ಸೋಂಕು ಎಲ್ಲೆಡೆ ಹರಡುತ್ತಿದೆ. ಜ್ವರದ ಬಾಧೆಯಿಂದ ಜನರನ್ನು ರಕ್ಷಿಸಬೇಕಿದೆ. ಅಽಕಾರಿಗಳು ಕರೊನಾ ವಿಚಾರದಲ್ಲಿ ನಿರ್ಲಕ್ಷ÷್ಯ ತಾಳದೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
    ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರೊನಾಮುಂಜಾಗ್ರತಾ ಕ್ರಮದ ಅಽಕಾರಗಳ ಸಭೆಯಲ್ಲಿ ಮಾತನಾಡಿ, ಜ್ವರ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮ ಅನುಸರಿಸಲು ಸೂಚಿಸಿದೆ. ಆರೋಗ್ಯ ಇಲಾಖೆ ಈ ಕುರಿತು ಕೆಲಸ ಆರಂಭಿಸಿದೆ. ಬೇರೆ ಇಲಾಖಾಽಕಾರಿಗಳೂ ಇದಕ್ಕೆ ಸಹಕಾರ ನೀಡಬೇಕು. ಈ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಒಂದೊಮ್ಮೆ ಜ್ವರದ ಲಕ್ಷಣ ಕಂಡುಬAದಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
    ತಾಲೂಕಿನಲ್ಲಿ ಮಂಗಗಳ ಸಾವು ಕಂಡುಬರುತ್ತಿದೆ. ಮಂಗನ ಕಾಯಿಲೆ ಹರಡುವ ಸಾಧ್ಯತೆ ಇದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಹಾಗಾಗಿ ಸೂಕ್ತ ಸುರಕ್ಷತಾ ಕ್ರಮ ಅನುಸರಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರನ್ನು ಕಾಡಿಗೆ ಹೋಗದಂತೆ ತಡೆದು ಅರಿವು ಮೂಡಿಸಬೇಕು ಎಂದರು.
    ತಾಲೂಕು ಆರೋಗ್ಯಾಽಕಾರಿ ಡಾ. ಸುರೇಶ್ ಮಾತನಾಡಿ, ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಎಚ್ಚರಿಕಾ ಕ್ರಮ ಅನುಸರಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ ಆರು ಬೆಡ್, ೧೫ ಐಸಿಯು ಬೆಡ್, ೧೧ ಕರೊನಾ ಸೆಂಟರ್ ಲಭ್ಯವಿದೆ. ತಾಲೂಕಿನ ದೊಡ್ಡಿನಕೊಪ್ಪದಲ್ಲಿ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
    ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್, ಪಿಎಸ್‌ಐ ಶಿವಾನಂದ ಕೋಳಿ, ಜೆಜೆಎಂ ಯೋಜನೆಯ ಎಇಇ ಶಿವಪ್ರಸಾದ್, ಪಶು ಆಸ್ಪತ್ರೆ ವೈದ್ಯಾಽಕಾರಿ ಡಾ. ನಟರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts