VIDEO| ಡ್ಯಾನ್ಸಿಂಗ್​ ಕಾರು ಸೀಜ್​: ಸ್ಕಾರ್ಪಿಯೋ ನೃತ್ಯ ನೋಡಿದ್ರೆ ಹುಬ್ಬೇರಿಸೋದು ಗ್ಯಾರೆಂಟಿ..!

Car
Published on

ಗಾಜಿಯಾಬಾದ್​: ಉತ್ತರ ಪ್ರದೇಶದ ಗಾಜಿಯಾಬಾದ್​ ಪೊಲೀಸರು ಮಂಗಳವಾರ ಡ್ಯಾನ್ಸಿಂಗ್​ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಮಾಲಿಕನಿಗೆ 41,500 ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಕೆಲವು ಮಂದಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಸ್ಥಳೀಯರು ನೀಡಿದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಕಾರಿನ ಮಾಲಿಕನನ್ನು ನಸುಮ್​ ಅಹ್ಮದ್​ ಎಂದು ಗುರುತಿಸಲಾಗಿದೆ. ರಸ್ತೆಯಲ್ಲೇ ತನ್ನ ಕಾರಿನಲ್ಲಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ಸಾಗುತ್ತಿದ್ದ. ವಿಶೇಷವಾಗಿ ತನ್ನ ಕಾರನ್ನು ಡ್ಯಾನ್ಸಿಂಗ್​ ಕಾರಿನ ರೀತಿ ಮಾರ್ಪಾಡು ಮಾಡಿಕೊಂಡು ಜೋರಾದ ಮ್ಯೂಸಿಕ್​ ಹಾಕಿಕೊಂಡು ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂದಹಾಗೆ ಎಸ್​ಯುವಿ ಕಾರಿನ ಮಾಲಿಕ ದೆಹಲಿಯ ನಿವಾಸಿ.

ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ವಾಹನವನ್ನು ಸೀಜ್​ ಮಾಡಲಾಗಿದ್ದು, ದಂಡವನ್ನು ವಿಧಿಸಲಾಗಿದೆ. ಯಾರಾದರೂ ವಾಹನವನ್ನು ಸ್ಟಿಕರ್​ಗಳ ಮೂಲಕ ಮಾರ್ಪಾಡು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net