ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಸಕಾಲ. ಆರ್ಥಿಕ ಸಂಕಷ್ಟಗಳು ಬಗೆಹರಿಯುತ್ತವೆ. ಶುಭಸಂಖ್ಯೆ: 4

ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿ ಸಾಧ್ಯತೆ. ಸಾಲದ ಸುಳಿಗೆ ಸಿಲುಕುವ ಸನ್ನಿವೇಶ. ರೋಗ ಬಾಧೆ. ಮಾನಸಿಕ ನೆಮ್ಮದಿಗೆ ಭಂಗ. ಶುಭಸಂಖ್ಯೆ: 1

ಮಿಥುನ: ಅಧಿಕ ಧನವ್ಯಯವಾಗುವ ಸಾಧ್ಯತೆ. ರಾಜಕೀಯ ವ್ಯಕ್ತಿಯಿಂದ ಆರ್ಥಿಕ ಸಹಾಯ ದೊರೆಯಲಿದೆ. ಅನಾರೋಗ್ಯ ಸಮಸ್ಯೆಗಳು. ಶುಭಸಂಖ್ಯೆ: 2

ಕಟಕ: ವ್ಯವಹಾರದಲ್ಲಿ ಅಧಿಕ ಲಾಭ ಬರುವುದು. ಅಹಂಭಾವದ ಮಾತು ಒಳ್ಳೆಯದಲ್ಲ. ಮಿತ್ರರಿಗೆ ನೋವು ಉಂಟಾಗಬಹುದು. ಶುಭಸಂಖ್ಯೆ: 6

ಸಿಂಹ: ಉದ್ಯೋಗ ಲಾಭವಾಗಿ ಮಾನಸಿಕ ಸಮಾಧಾನ. ಆರೋಗ್ಯ ವ್ಯತ್ಯಾಸ. ಅಧಿಕ ಖರ್ಚು. ಉದ್ಯೋಗ ನಿಮಿತ್ತ ದೂರಪ್ರಯಾಣ. ಶುಭಸಂಖ್ಯೆ: 2

ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಭ್ಯ. ನಷ್ಟದ ಆತಂಕ ಎದುರಾಗುವುದು. ನಿದ್ರಾಭಂಗ. ತಂದೆಯ ಮಿತ್ರರಿಂದ ಲಾಭ ಬರುವುದು. ಶುಭಸಂಖ್ಯೆ: 7

ತುಲಾ: ಉದ್ಯೋಗದಲ್ಲಿ ತೊಂದರೆಯಾಗುವ ಸಾಧ್ಯತೆ. ಬದಲಾವಣೆಗೆ ಯೋಚನೆ. ಆತ್ಮಗೌರವದಿಂದ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 5

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಅಡೆತಡೆಗಳ ನಿವಾರಣೆ. ಮನಸ್ಸಿನಲ್ಲಿ ಮಂದಹಾಸ. ಶುಭಸಂಖ್ಯೆ: 2

ಧನುಸ್ಸು: ಅಧಿಕಾರಿಗಳ ಭೇಟಿ ಮಾಡುವಿರಿ. ಸಾಲಗಾರರಿಂದ ತೊಂದರೆಯಾಗುವ ಸಾಧ್ಯತೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವಿರಿ. ಶುಭಸಂಖ್ಯೆ: 6

ಮಕರ: ಮಕ್ಕಳಿಂದ ಹೆಮ್ಮೆ. ಪೊಲೀಸ್ ಸ್ಟೇಷನ್ ಮತ್ತು ನ್ಯಾಯಾಲಯಕ್ಕೆ ಅಲೆದಾಟ. ಕಲ್ಪನೆ ಮತ್ತು ಭಾವನೆಗಳಲ್ಲಿ ವಿಹರಿಸುವಿರಿ. ಶುಭಸಂಖ್ಯೆ: 4

ಕುಂಭ: ಆಸ್ತಿ ಮಾರಾಟದ ಕುರಿತು ಆಲೋಚನೆ ಮಾಡುವಿರಿ. ಪ್ರಯಾಣದಲ್ಲಿ ವಸ್ತುಗಳ ಕಳವು. ಶತ್ರುಗಳು ಅಧಿಕವಾಗುವ ಅಪಾಯವಿದೆ. ಶುಭಸಂಖ್ಯೆ: 8

ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ ಮಾಡಬೇಕಾ ಗುವುದು. ಆರೋಗ್ಯ ಸಮಸ್ಯೆ ಕಾಡಬಹುದು. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net