ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ, ಕೃಷಿ ವ್ಯಾಪಾರದಲ್ಲಿ ಶುಭ, ಸಾಲ ಬಾಧೆಯಿಂದ ಮುಕ್ತಿ

Nithya Bhavishya
Published on

ಮೇಷ: ಮಾನಸಿಕ ಕಿರಿಕಿರಿ ಉಂಟಾಗಲಿದೆ. ಪತ್ನಿಗೆ ಆರೋಗ್ಯದಲ್ಲಿ ತೊಂದರೆ. ಪಿತ್ರಾರ್ಜಿತ ಆಸ್ತಿಯಿಂದ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು. ಸಹೋದರನೊಂದಿಗೆ ಆಸ್ತಿ ವಿಚಾರದಲ್ಲಿ ಕಲಹ, ಸಹನೆ ಇರಲಿ. ಚಿಕ್ಕ ವ್ಯಾಪಾರಿಗಳಿಗೆ ಉತ್ತಮ ದಿನ. ಶುಭಸಂಖ್ಯೆ:1

ಮಿಥುನ: ಅನಾರೋಗ್ಯದಿಂದ ಅಧಿಕಾರ ಕಳೆದುಕೊಳ್ಳುವ ಭೀತಿ. ಅಧಿಕ ಖರ್ಚು ಬರಬಹುದು. ದಾಂಪತ್ಯದಲ್ಲಿ ವಿರಸ. ಶಾಂತವಾಗಿರಿ. ಶುಭಸಂಖ್ಯೆ: 9

ಕಟಕ: ಹಣಕಾಸಿನ ವಿಚಾರದಲ್ಲಿ ಪ್ರಗತಿ. ಕೆಲಸದಲ್ಲಿ ಹೆಚ್ಚಿನ ಶ್ರಮದ ಅಗತ್ಯವಿದೆ. ವಸ್ತುಗಳ ಖರೀದಿಯಲ್ಲಿ ಮೋಸವಾಗಬಹುದು. ಶುಭಸಂಖ್ಯೆ: 3

ಸಿಂಹ: ಸರ್ಕಾರಿ ಕೆಲಸಗಳಲ್ಲಿ ವಿರೋಧ. ಕುಟುಂಬದಲ್ಲಿ ಸಾಮರಸ್ಯ. ಮಕ್ಕಳ ಬಗ್ಗೆ ಎಚ್ಚರವಿರಲಿ. ವ್ಯವಸಾಯಗಾರರಿಗೆ ಶುಭದಿನ. ಶುಭಸಂಖ್ಯೆ: 2

ಕನ್ಯಾ: ರಾಜಕೀಯ ಪ್ರವೇಶಿಸಲು ಸಕಾಲ. ವಾಹನಕೊಳ್ಳುವ ಯೋಜನೆ ಕಾರ್ಯಗತವಾಗಲಿ. ವಿವಾಹ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ:7

ತುಲಾ: ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾದೀತು. ದಾಂಪತ್ಯದಲ್ಲಿ ಜಗಳ, ಹೊಂದಾಣಿಕೆ ಅಗತ್ಯ. ಮಕ್ಕಳ ವಿಷಯವಾಗಿ ತೊಂದರೆ. ಶುಭಸಂಖ್ಯೆ: 6

ವೃಶ್ಚಿಕ: ಆಕಸ್ಮಿಕ ಧನ ಲಾಭ. ಕೃಷಿ ವ್ಯಾಪಾರದಲ್ಲಿ ಶುಭ. ಸಾಲ ಬಾಧೆಯಿಂದ ಮುಕ್ತಿ. ವಿದೇಶ ಪ್ರವಾಸದ ಅವಕಾಶ ಒದಗಿ ಬರುವುದು. ಶುಭಸಂಖ್ಯೆ: 8

ಧನುಸ್ಸು: ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಪುಸ್ತಕ ಪ್ರಕಾಶಕರಿಗೆ ಆದಾಯ. ಕಾರ್ವಿುಕ ವರ್ಗದವರಿಗೆ ಶುಭ. ಶುಭಸಂಖ್ಯೆ: 3

ಮಕರ: ಕಣ್ಣಿನ ಸಮಸ್ಯೆಯುಂಟಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ. ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 6

ಕುಂಭ: ಮಾನಸಿಕ ಚಿಂತೆ ಕಾಡಲಿದೆ. ಸಾರ್ವಜನಿಕ ರಂಗದಲ್ಲಿ ಅವಮಾನ ಎದುರಿಸಬೇಕಾದೀತು. ಪ್ರಯತ್ನದಿಂದ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 4

ಮೀನ: ದಾಂಪತ್ಯದಲ್ಲಿ ನಿರಾಸಕ್ತಿ. ನಂಬಿದವರಿಂದಲೇ ಮೋಸ ಹೋಗುವಿರಿ, ಎಚ್ಚರವಾಗಿರಿ. ಮಗಳ ವೈವಾಹಿಕ ಜೀವನದ ಚಿಂತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net