More

    ದೀಪಾವಳಿ ದೋಖಾ; ಬುಕ್ ಮಾಡಿದ್ದು ಲ್ಯಾಪ್​ಟಾಪ್, ಬಂದದ್ದು ಮಾತ್ರ ಕಲ್ಲು!

    ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಆನ್ಲೈನ್​ ಶಾಪಿಂಗ್ ಬಂಪರ್ ರಿಯಾಯಿತಿ ಕೊಡುಗೆ ನೀಡಿದ್ದರು. ಮಾರುಹೋದ ಗ್ರಾಹಕರು ಅಗತ್ಯವಿರುವ ವಸ್ತುಗಳ ಶಾಪಿಂಗ್ ಮಾಡಿದ್ದರು. ಇದೀಗ ಮಂಗಳೂರಿನ ಚಿನ್ಮಯ ರಮಣ ಎಂಬುವವರು ಜನಪ್ರಿಯ ಇ-ಕಾಮರ್ಸ್​ ತಾಣ ಪ್ಲಿಪ್​ಕಾರ್ಟ್​​ನಲ್ಲಿ ಗೇಮಿಂಗ್ ಲ್ಯಾಪ್​ಟಾಪ್​ ಬುಕ್ ಮಾಡಿದ್ದಾರೆ.

    ಆರ್ಡರ್ ಕೈ ಸೇರಿ, ಬಾಕ್ಸ್​ ತೆರೆದು ನೋಡಿದಾಗ ಗ್ರಾಹಕ ಚಿನ್ಮಯ್ ಬೆಚ್ಚಿಬಿದ್ದಾರೆ. ಪ್ಲಿಪ್​ಕಾರ್ಟ್​ನಿಂದ ಬಂದ ಬಾಕ್ಸ್​ ಒಳಗೆ ಲ್ಯಾಪ್​ಟಾಪ್ ಬದಲಿಗೆ ಕಲ್ಲನ್ನು ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಆಕ್ರೋಶಗೊಂಡ ಗ್ರಾಹಕ ನೇರವಾಗಿ ಪ್ಲಿಪ್​ಕಾರ್ಟ್​ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಫ್ಲಿಪ್‌ಕಾರ್ಟ್ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಿದೆ ಎಂದು ತಿಳಿದು ಬಂದಿದೆ.

    ಚಿನ್ಮಯ ರಮಣ ತನ್ನ ಸ್ನೇಹಿತನಿಗೆಂದು ಅಕ್ಟೋಬರ್ 15 ರಂದು Asus TUF Gaming F15 ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆರ್ಡರ್ ಅ.20ರಂದು ಕೈಸೇರಿದೆ. ನಂತರ ಬಾಕ್ಸ್ ತೆರೆದಾಗ ಗೇಮಿಂಗ್ ಲ್ಯಾಪ್‌ಟಾಪ್ ಬದಲಿಗೆ ಕಲ್ಲು ಹಾಗೂ ಕಸ ಪತ್ತೆಯಾಗಿದೆ. ಇದರ ಫೋಟೋಗಳನ್ನು ಚಿನ್ಮಯ್ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts