More

    VIDEO: 10ರೂ. ನಾಣ್ಯಗಳೊಂದಿಗೆ ಸ್ಕೂಟರ್ ಖರೀದಿಸಲು ಹೋದ ಯುವಕ; ಚಿಲ್ಲರೆ ಎಣಿಸಿ ಸುಸ್ತಾದ ಶೋರೂಂ ಮಂದಿ!

    ಉತ್ತರಾಖಂಡ್: ಪ್ರತಿಯೊಬ್ಬರಿಗೂ ಸ್ವಂತದ್ದೊಂದು ವಾಹನ ಖರೀದಿಸಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಕಷ್ಟ ಪಟ್ಟು ದುಡಿದ ಹಣವನ್ನು ಕೂಡಿಡುತ್ತಾ ಹಣ ಹೊಂದಿಸುತ್ತಾರೆ. ಹಣ ಒಟ್ಟಾಗುತ್ತಿದ್ದಂತೆ ತಮ್ಮ ಕನಸಿನ ವಾಹನ ತೆಗೆದು ಸಂಭ್ರಮ ಪಡುತ್ತಾರೆ.

    ಇದೀಗ ಉತ್ತರಾಖಂಡ್​ನ ಯುವಕನೊಬ್ಬ ನಾಣ್ಯಗಳನ್ನು ಸಂಗ್ರಹಿಸಿಟ್ಟಿದ್ದಾನೆ. ವಿಶೇಷವೆಂದರೆ ಅದು ಹತ್ತು ರೂಪಾಯಿ ನಾಣ್ಯ. ಕಳೆದ ಎರಡು ವರ್ಷಗಳಿಂದ ಹತ್ತು ರೂಪಾಯಿ ನಾಣ್ಯ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಬಹುತೇಕ ಜನರು ಹತ್ತು ರೂ. ನಾಣ್ಯ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಯುವಕ ಮಾತ್ರ, ಹತ್ತು ರೂ. ನಾಣ್ಯವನ್ನೇ ಕೂಡಿಟ್ಟಿದ್ದಾನೆ.

    ಕೂಡಿಟ್ಟ ನಾಣ್ಯವನ್ನು ತೆಗೆದುಕೊಂಡು ಯುವಕ ಹೋಗಿದ್ದ ಮಾತ್ರ ಟಿವಿಎಸ್​ ವಾಹನ ಮಳಿಗೆಗೆ. ನೇರವಾಗಿ ನಾಣ್ಯಗಳನ್ನು ಡೀಲರ್​ನ ಮುಂದಿಟ್ಟಿದ್ದಾನೆ. ಇದನ್ನು ನೋಡಿ ಶೋರೂಂನಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲ, ಇದರಲ್ಲಿ 50,000 ರೂ. ಇದೆ. ನನಗೆ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಕೊಡಿ ಎಂದು ಹೇಳಿದ್ದಾನೆ.

    ಕೂಡಲೇ ಶೋರೂಂ ಮಂದಿ ನಾಣ್ಯಗಳನ್ನೆಲ್ಲಾ ಒಟ್ಟು ಸೇರಿಸಿ ಹಣ ಲೆಕ್ಕ ಹಾಕಿದ್ದಾರೆ. ಯುವಕ ಕಳೆದ ಮೂರು ವರ್ಷಗಳಿಂದ ಹತ್ತು ರೂ. ನಾಣ್ಯ ಸಂಗ್ರಹಿಸುತ್ತಿದ್ದು, 85,210 ರೂ. ಬೆಲೆಯ ಸ್ಕೂಟರ್​ಗೆ 50,000 ರೂಪಾಯಿಯನ್ನು ನಾಣ್ಯದ ಮೂಲಕ ಪಾವತಿಸಿದ್ದಾನೆ.

    ಶೋರೂಂನಲ್ಲಿ ನಾಣ್ಯ ಎಣಿಸುವುದನ್ನು ವಿಡಿಯೋ ಮಾಡಿ ಹರಿಬಿಡಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts