More

  ಪವಿತ್ರಾ ನನ್ನ ಮಗನ ಜೀವನ ಹಾಳು ಮಾಡಿ ಬಿಟ್ಟಳು; ಮೃತ ಚಂದ್ರಕಾಂತನ ತಾಯಿ ಕಣ್ಣೀರು

  ಹೈದ್ರಾಬಾದ್​​: ತ್ರಿನಯನಿ ಧಾರಾವಾಹಿ ಖ್ಯಾತಿಯ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಂತೆ, ಈಕೆ ಗೆಳೆಯ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡನು. ಈ ಇಬ್ಬರ ಸಾವು ಚಿತ್ರರಂಗವನ್ನು ಆಘಾತಕ್ಕೀಡು ಮಾಡಿದೆ. ಮಗನ ಸಾವಿನ ಕುರಿತಾಗಿ ಚಂದ್ರಕಾಂತ್​​ ತಾಯಿ ಮಾಧ್ಯಮದವರೊಂದಿಗೆ  ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

  ಪವಿತ್ರಾ ಕಾರು ಅಪಘಾತದಲ್ಲಿ ಮೃತಪಟ್ಟರೆ, ಚಂದ್ರಕಾಂತ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದ. ಪವಿತ್ರಾ ಜಯರಾಂ ಸಾವು ತಾಳಲಾರದೆ ನಟ ಚಂದ್ರಕಾಂತ್ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ.. ಮಗನ ಸಾವಿಗೆ ಪವಿತ್ರಾ ಕಾರಣ ಎಂದು ಚಂದುವಿನ ತಾಯಿ ಸಂಚಲನ ಮೂಡಿಸಿದ್ದಾರೆ. ಮಗನ ಸಾವಿನಿಂದ ಚಂದುವಿನ ತಾಯಿ ಮನನೊಂದು ಕಣ್ಣೀರು ಸುರಿಸುತ್ತಿದ್ದಾರೆ. ಇದರಿಂದ ಮಗನ ಬದುಕು ನಾಶವಾಗಿದೆ ಎಂದು ಅಳಲು ತೋಡಿಕೊಂಡರು.

  ಚಂದ್ರಕಾಂತ್ ಅವರ ತಾಯಿ ಯೂಟ್ಯೂಬ್ ಚಾನೆಲ್ ಜತೆ ಮಾತನಾಡಿ, ”ಪವಿತ್ರಾ ನನ್ನ ಮಗನ ಜೀವನ ಹಾಳು ಮಾಡಿದ್ದಾಳೆ. ನಾವಿಬ್ಬರೂ ಮದುವೆಯಾಗಿದ್ದೇವೆ, ಅವರು ನನ್ನೊಂದಿಗೆ ಇರುತ್ತಾರೆ ಎಂದು ಪವಿತ್ರಾ ಹೇಳುತ್ತಿದ್ದಳು. ಆ ದಿನ ನಮಗೆ ಫೋನಿನಲ್ಲಿ ಕಾರು ಅಪಘಾತವಾಗಿದ್ದು ಪವಿತ್ರಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಸಾಯುವ ಮುನ್ನವೇ ನಮಗೆ ಕರೆ ಮಾಡಿದ್ದನು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಂದು ಅಳಲು ತೋಡಿಕೊಂಡಿದ್ದನು ಎಂದಿದ್ದಾರೆ.

  ‘‘ಸಾವಿಗೂ ಮುನ್ನ ತನ್ನ ಸ್ನೇಹಿತರೊಂದಿಗೆ ಸೇರಿ ಡ್ರಗ್ಸ್ ಸೇವಿಸಿದ್ದ. ಆ ದಿನ ಅವನು ಸ್ನೇಹಿತನ ಕೋಣೆಯಲ್ಲಿ ಮಲಗಿದ್ದ. ಭಯದಿಂದ ಅಲ್ಲೇ ಮಲಗಲು ಬಿಟ್ಟೆವು. ಆತನ ಕೈಗೆ ಪೆಟ್ಟು ಬಿದ್ದು ರಕ್ತ ಸುರಿಯಿತು ಎಂದು ಸ್ನೇಹಿತರು ಹೇಳಿದ್ದಾರೆ. ಆದರೆ ಅವನು ಸಾಯುತ್ತಾನೆಂದು ನಾವು ನಿರೀಕ್ಷಿಸಿರಲಿಲ್ಲ. ಸಾಯುವ ಮೊದಲು ಅವನು ತನ್ನ ತಾಯಿ ಮತ್ತು ಮಕ್ಕಳನ್ನು ನೆನಪು ಬರಲಿಲ್ಲವೆ?  ಯಾಕೆ ಹೀಗೆ ಮಾಡಿದ?  ನಮ್ಮ ಕುಟುಂಬವನ್ನು ನಾಶಮಾಡಿದಳು. ನನ್ನ ಮಗನನ್ನು ನನ್ನಿಂದ ಕಿತ್ತುಕೊಂಡಳು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

  ಆತ್ಮಹತ್ಯೆಗೂ ಮುನ್ನ ಚಂದ್ರಕಾಂತ್​ ಸರಣಿ ಪೋಸ್ಟ್; ಗೆಳತಿ ಇಲ್ಲದೆ ನರಕಯಾತನೆ ಅನುಭವಿಸಿದ್ದ ಈ ನಟ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts