More

    ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾದ್ದು ರಿಷಿ ಸುನಕ್; ನೆಟ್ಟಿಗರು ಶುಭಾಶಯ ತಿಳಿಸಿದ್ದು ಮಾತ್ರ ಆಶಿಶ್ ನೆಹ್ರಾಗೆ!

    ನವದೆಹಲಿ: ಭಾರತ ಮೂಲದ ರಿಷಿ ಸುನಕ್ ಬ್ರಿಟನ್​ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ ಭಾರತೀಯರಂತೂ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯವಾದ ಚರ್ಚೆಯಲ್ಲಿ ತೊಡಗಿದ್ದಾರೆ.

    ಇದೀಗ ನೆಟ್ಟಿಗರು ರಿಷಿ ಸುನಕ್ ಪ್ರಧಾನಿಯಾಗಿರುವುದಕ್ಕೆ, ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಇವರಿಬ್ಬರ ಮುಖದ ಹೋಲಿಕೆಯಲ್ಲಿ ಸಾಮ್ಯತೆ ಕಂಡುಬಂದಿರುವುದು!

    ಜನರಂತೂ ಸಾಮಾಜಿಕ ಜಾಲತಾಣದಲ್ಲಿ ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಫೋಟೋ ಹಾಕಿ ತಮಾಷೆಯ ಶೀರ್ಷಿಕೆ ನೀಡುತ್ತಿದ್ದಾರೆ. ಒಬ್ಬರಂತೂ ರಿಷಿ ಸುನಕ್ ಫೋಟೋ ಹಾಕಿ, ಬ್ರಿಟನ್​ನ ನೂತನ ಪ್ರಧಾನಿ ಆಶಿಶ್​ ನೆಹ್ರಾಗೆ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ.

    ಮತ್ತೊಬ್ಬರು ಗ್ರೌಂಡ್​ನಲ್ಲಿ ಬೌಲಿಂಗ್ ಮಾಡಿಕೊಂಡಿದ್ದ ನೆಹ್ರಾ, ಬ್ರಿಟನ್ ಪ್ರಧಾನಿ ಯಾವಾಗ ಆದರು ಎಂದು ತಮಾಷೆಯಾಡಿದ್ದಾರೆ.

    ಆಶಿಶ್ ನೆಹ್ರಾ ಐಪಿಎಲ್​ನಲ್ಲಿ ಗುಜರಾತ್ ತಂಡದ ಕೋಚ್. ಈ ಸಮಯದ ಫೋಟೋವೊಂದನ್ನು ಪೋಸ್ಟ್ ಮಾಡಿ, ನೆಹ್ರಾ ಐಪಿಎಲ್ ಸಮಯದಲ್ಲಿ ಯುಕೆ ಪ್ರಧಾನಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ಟ್ವಿಟರ್​ನಲ್ಲಂತೂ ಒಬ್ಬರು, 2003ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಬಳಿಸಿದ್ದ ನೆಹ್ರಾ, ಇದೀಗ 2022ರಲ್ಲಿ ಬ್ರಿಟನ್​ನ ಪ್ರಧಾನಿ. ಈವರೆಗಿನ ಅವರ ಪಯಣ ಅದ್ಭುತವಾದದ್ದು. ನಿಮಗಿದೋ ಶುಭಾಶಯ ಎಂದು ಸ್ವಾರಸ್ಯಕರವಾಗಿ ಪೋಸ್ಟ್ ಮಾಡಿದ್ದಾರೆ. ತಮಾಷೆಯಾಗಿ ಶುಭಾಶಯ ತಿಳಿಸುತ್ತಾ, ಟ್ವಿಟರ್​ನಲ್ಲಿ DJSingh ಎಂಬುವವರು ಆಶಿಶ್ ನೆಹ್ರಾ ಹಾಗೂ ರಿಷಿ ಸುನಕ್ ಕುಂಭ ಮೇಳದಲ್ಲಿ ಕಾಣೆಯಾದ ಸಹೋದರರಂತೆ ಕಾಣುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts