More

    ಉಮಾಗೆ ಮಿಸೆಸ್ ಸೌತ್ ಏಷ್ಯಾ ವರ್ಲ್ಡ್ ಕಿರೀಟ

    ಹುಬ್ಬಳ್ಳಿ: ಅಮೆರಿಕದಲ್ಲಿ ನೆಲೆಸಿರುವ ಮೂಲತಃ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಉಮಾ ಸುರಕೊಡ್ ಅವರು ಮಿಸೆಸ್ ಸೌತ್ ಏಷ್ಯಾ ವರ್ಲ್ಡ್- 2024 ಕಿರೀಟಕ್ಕೆ ಭಾಜನರಾಗಿದ್ದಾರೆ.

    ಅಮೆರಿಕದ ಮೈ ಡ್ರೀಮ್ ಟಿವಿ ವತಿಯಿಂದ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟಿ ಪೂಜಾ ಬಾತ್ರಾ ಅವರು ಉಮಾ ಸುರಕೊಡ್ ಅವರಿಗೆ ಪ್ರತಿಷ್ಠಿತ ಕಿರೀಟ ತೊಡಿಸಿ ಅಭಿನಂದಿಸಿದರು.

    ಈ ಮೊದಲು ಉಮಾ ಸುರಕೋಡ್ ಅವರು 2023ರ ಅಕ್ಟೋಬರ್ನಲ್ಲಿ ಮಿಸೆಸ್ ಭಾರತ್ ಕ್ಯಾಲಿಫೋನಿರ್ಯಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

    2016ರಲ್ಲಿ ಅಮೆರಿಕಕ್ಕೆ ಹೋಗುವ ಮುನ್ನ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಉಮಾ ನಂತರ ಮಾಸ್ಟರ್ಸ್ ಡಿಗ್ರಿಯನ್ನು ಸಾಂತಾ ಕ್ಲಾರಾ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಸದ್ಯ ಅಮೆರಿಕದಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಮಲ್ಲಿಕಾರ್ಜುನ ಹಾಗೂ ವಿದ್ಯಾ ಸುರಕೋಡ್ ದಂಪತಿ ಪುತ್ರಿ ಉಮಾ, ಮಹಿಳಾ ಸಾಧಕಿಯರಿಗೆ ಆತ್ಮಸ್ಥೆ$ರ್ಯ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಮಹಿಳೆಯರ ಹಕ್ಕುಗಳು, ಶಿಕ್ಷಣ, ಉದ್ಯೋಗ ಹಾಗೂ ಮುಖ್ಯ ವಾಹಿನಿಯಲ್ಲಿ ಅವರಿಗೆ ಇರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts