VIDEO: ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಾಗರ ಹಾವು; ಬೆಚ್ಚಿ ಬಿದ್ದ ರೋಗಿಗಳು!

Snake
Published on

ತೆಲಂಗಾಣ: ಹಾವುಗಳು ಯಾವ ಸಂದರ್ಭದಲ್ಲಿ, ಎಲ್ಲಿ ಪ್ರತ್ಯಕ್ಷವಾಗತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮಿಂದೊಮ್ಮೆಲೆ ಹಾವು ಕಾಣಿಸಿಕೊಂಡರೆ ಎಂತಹ ಧೈರ್ಯವಂತನಿಗಾದರೂ ಒಂದು ಕ್ಷಣ ಭಯವಾಗುತ್ತದೆ. ಇದೀಗ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಂಡು ಎಲ್ಲರನ್ನು ಭಯ ಬೀಳಿಸಿದೆ.

ಆಸ್ಪತ್ರೆಯ ಪುರಷರ ವಾರ್ಡ್​ನಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ಹಾವು ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ತಿಂಗಳಿನಲ್ಲಿ ನಾಗರ ಹಾವು ಇದು ಎರಡನೇ ಬಾರಿಗೆ ಬಂದಿರುವುದು ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ವಾರ್ಡ್​ನಲ್ಲಿದ್ದ ಎಲ್ಲರೂ ಭಯ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ರೋಗಿಗಳು ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net