ಪಾಕಿಸ್ತಾನ ವಿರುದ್ಧ ಮ್ಯಾಚ್ ಗೆಲ್ಲುತ್ತಲೇ ಭಾವುಕರಾದ ವಿರಾಟ್ ಕೊಹ್ಲಿ; ನಂತರ ಹೇಳಿದ್ದೇನು?

Kohli
Published on

ಮೆಲ್ಬೋರ್ನ್: ಟಿ-20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಆಡಿದ ಅದ್ಭುತ ಇನ್ನಿಂಗ್ಸ್ ಕಾರಣದಿಂದ ಭಾರತ ಪಂದ್ಯ ಗೆದ್ದುಕೊಂಡಿತು. ಆರಂಭದಲ್ಲಿಯೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವುದರ ಮೂಲಕ ಜಯದ ಹಾದಿಯತ್ತ ಕೊಂಡೊಯ್ದರು.

ಟೀಂ ಇಂಡಿಯಾ ಗೆಲುವಿನ ನಗೆ ಬೀರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾದರು. ಪಂದ್ಯದ ಬಳಿಕ ಮಾತನಾಡುತ್ತಾ, ಕ್ರೀಸ್​​ನ ಇನ್ನೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯಾ, ಕೊನೆಯವರೆಗೂ ಆಡಬೇಕು ಎಂದು ಹೇಳುತ್ತಲೇ ಇದ್ದ. ನಾನು ಹಾರ್ದಿಕ್​ ಪಾಂಡ್ಯಾ ಆಡಿದ ಮಾತಿಗೆ ಸೋತಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಒತ್ತಡದಲ್ಲಿ ಬ್ಯಾಟ್ ಬೀಸುವುದೆಂದರೆ ಇಷ್ಟ. ಹೀಗಾಗಿ ಗಮನವಿಟ್ಟು ಬಾಲ್ ಹೇಗೆ ಬರುತ್ತಿದೆ ಎಂಬುವುದನ್ನು ಅರ್ಥೈಸಿದೆ. ಹೀಗಾಗಿ ಫೈನ್​ ಲೆಗ್​ನತ್ತ ಸಿಕ್ಸರ್ ಸಿಡಿಸಲು ಸಾಧ್ಯವಾಯಿತು. ಈ ಕ್ಷಣ ನನಗೆ ಬಹಳ ವಿಶೇಷವಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಜಯ ಗಳಿಸುವಲ್ಲಿ ವಿರಾಟ್ ಆಡಿದ ಇನ್ನಿಂಗ್ಸ್ ಪ್ರಮುಖ ಕಾರಣ. ಹಾರ್ದಿಕ್ ಪಾಂಡ್ಯಾ ಜೊತೆಯಾಗಿ ಇನ್ನಿಂಗ್ಸ್​ ಕಟ್ಟುತ್ತಾ ಹೋದರು. ಪಂದ್ಯ ಗೆಲ್ಲುತ್ತಿದ್ದಂತೆ ತಂಡದ ಸಹ ಆಟಗಾರರು ಮೈದಾನದತ್ತ ಓಡಿ ಬಂದು ಕೊಂಡಾಡಿದ್ದಾರೆ. ನಾಯಕ ರೋಹಿತ್ ಶರ್ಮಾ ಓಡಿ ಬಂದು, ಕೊಹ್ಲಿಯನ್ನು ಎತ್ತಿ ಸಂಭ್ರಮಪಟ್ಟರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net