

ಬೆಳಗಾವಿ: ದೇಶದಾದ್ಯಂತ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾಗಿ ಎರಡು ಆವರಗಳು ಕಳೆದರೂ, ಹೌಸ್ಫುಲ್ ಪ್ರದರ್ಶನ ಮಾತ್ರ ನಿಂತಿಲ್ಲ. ಜನ ಕುಟುಂಬ ಸಮೇತರಾಗಿ ಚಿತ್ರ ಮಂದಿರಕ್ಕೆ ತೆರಳುತ್ತಿದ್ದಾರೆ.
ಇದೀಗ ಬೆಳಗಾವಿಯ ಕಲಾವಿದೆಯೊಬ್ಬರು ಬಿಡಿಸಿದ ರಂಗೋಲಿಯ ಮೂಲಕ ಕಾಂತಾರ ಅರಳಿದೆ. ನಟ ರಿಷಬ್ ಶೆಟ್ಟಿಯಿರುವ ಕಾಂತಾರ ಸಿನಿಮಾದ ಪೋಸ್ಟರನ್ನು ರಂಗೋಲಿಯಲ್ಲಿ ಚಿತ್ರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಮಜಗಾವಿಯ ಕಲ್ಲೇಶ್ವರ ನಗರದ ರುಕ್ಮಿಣಿ ಅಲವಾಡಕರ್ ಎಂಬ ಕಲಾವಿದೆ 4x4 ಅಳತೆಯಲ್ಲಿ ರಂಗೋಲಿ ಬಿಡಿಸಿದ್ದಾರೆ.