More

    VIDEO: ಸಿಡ್ನಿಗೆ ಬಂದಿಳಿದ ಟೀಂ ಇಂಡಿಯಾ; ಕೊಹ್ಲಿ ನೋಡಲು ಜನವೋ ಜನ!

    ಸಿಡ್ನಿ: ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ, ಇದೀಗ ನೆದರ್ಲ್ಯಾಂಡ್ ವಿರುದ್ಧ ಎರಡನೇ ಪಂದ್ಯವನ್ನಾಡಲು ಸಿಡ್ನಿಗೆ ಬಂದಿಳಿದಿದೆ. ಅ.27 ರಂದು ಸಿಡ್ನಿ ಮೈದಾನದಲ್ಲಿ ಭಾರತ ನೆದರ್ಲ್ಯಾಂಡ್​ ತಂಡವನ್ನು ಎದುರಿಸಲಿದೆ.

    ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿ ಟಿ-20 ವಿಶ್ವಕಪ್​ ಶುಭಾರಂಭ ಮಾಡಿರುವ ರೋಹಿತ್​ ಶರ್ಮಾ ಪಡೆ, ಇದೀಗ ನೆದರ್ಲ್ಯಾಂಡ್ ತಂಡವನ್ನು ಎದುರಿಸಲು ಮೆಲ್ಬೋರ್ನ್​ ಅಂಗಳದಿಂದ ಸಿಡ್ನಿ ತಲುಪಿದೆ. ಸಿಡ್ನಿಗೆ ಆಗಮಿಸುತ್ತಿದ್ದಂತೆ ಟೀಂ ಇಂಡಿಯಾವನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಸೇರಿದ್ದರು.

    ಈ ವೇಳೆ​ ವಿರಾಟ್ ಕೊಹ್ಲಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಅಟೋಗ್ರಾಫ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕಳೆದ ಪಂದ್ಯದಲ್ಲಿ ಅಜೇಯ 82 ರನ್​ ಗಳಿಸಿ ಭಾರತಕ್ಕೆ ಕೊಹ್ಲಿ ಜಯ ತಂದು ಕೊಟ್ಟಿದ್ದರು. ಈ ಮೂಲಕ ಕೊಹ್ಲಿಯ ಬ್ಯಾಟ್ ಮಂಕಾಗಿದೆ ಎಂದು ಟೀಕಿಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಬಹುದಿನಗಳ ನಂತರ ಮೈದಾನದಲ್ಲಿ ಕೊಹ್ಲಿಯ ಅಗ್ರೆಸ್ಸಿವ್ ಆಟ ಕಂಡ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts