More

  ಫಸಲು ಉದುರುವ ಆತಂಕದಲ್ಲಿ ಬೆಳೆಗಾರರು; ಮಾವಿಗೆ ಬೆಲೆ ಇದ್ದರೂ ಬೆಳೆ ಇಲ್ಲದ ಸ್ಥಿತಿ

  ಕೋಲಾರ: ಕಳೆದ 6-7 ತಿಂಗಳಿಂದ ಬಿಸಿಲಿನ ಬೇಗೆಗೆ ಬೇಸತ್ತಿದ್ದವರಿಗೆ ವಾರದಿಂದ ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿರುವುದು ಸಂತಸ ತರಿಸಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಸಲಿಗೆ ಹೊಡೆತ ಬೀಳಲಿದೆಯೋ ಎಂಬ ಆತಂಕ ಮಾವು ಬೆಳೆಗಾರರಿಗೆ ಎದುರಾಗಿದೆ.

  ಬೆಳವಣಿಗೆ ಇಲ್ಲದೆ ಕುಂಠಿತಗೊಂಡಿದ್ದ ತರಕಾರಿ ಬೆಳೆಗಳು ಸುಧಾರಿಸಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಟೊಮ್ಯಾಟೊ ಬೆಳೆಯಂತೂ ಬಿಸಿಲಿಗೆ ಶೇ.10 ಬೆಳವಣಿಗೆಯಾಗಿರಲಿಲ್ಲ. ಈಗ ಮಳೆಯಿಂದ ವಾತಾವರಣವೂ ತಂಪಾಗಿ ಬೆಳೆ ಸುಧಾರಿಸಿಕೊಳ್ಳುತ್ತಿದೆ.

  ಮೋಡ ಮುಸುಕಿದ ವಾತಾವರಣದೊಂದಿಗೆ ಗುಡುಗು ಸಹಿತ ಅಲ್ಲಲ್ಲಿ ಸುರಿಯುತ್ತಿರುವ ಮಳೆ ಜತೆಗೆ ಗಾಳಿಯೂ ಜೋರಾದರೆ ಮರಗಳಲ್ಲಿರುವ ಮಾವು ಉದುರಿ ನಷ್ಟವಾಗುವ ಆತಂಕ ಸೃಷ್ಟಿಯಾಗಿದೆ.

  ಮಾರುಕಟ್ಟೆಯಲ್ಲಿ ಮಾವಿಗೆ ಹೆಚ್ಚಿನ ಬೇಡಿಕೆಯಿದ್ದು, ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ ಮೋಡ ಕವಿದ ವಾತಾವರಣದಿಂದ ಕಾಯಿ ಬೇಗ ಋತುವಿಗೆ ಬರುತ್ತಿಲ್ಲ. ಮಳೆಯಲ್ಲಿ ಮಾವಿನ ಕಟಾವು ಕಷ್ಟವಾಗುತ್ತದೆ. ಇದರಿಂದ ನಿರೀಕ್ಷಿಸಿದ್ದ ಮಾವು ಮಾರುಕಟ್ಟೆಗೆ ಬಾರದ ಕಾರಣ ಮಂಡಿ ಮಾಲೀಕರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಇನ್ನೂ ಎರಡು ಮೂರು ದಿನಗಳು ಇದೇ ರೀತಿಯ ಪರಿಸ್ಥಿತಿ ಏರ್ಪಟ್ಟರೆ ವ್ಯಾಪಾರಸ್ಥರು ಬೇರೆಡೆ ಹೋಗುವ ಸಂಭವವಿದ್ದು, ಮಂಡಿ ಮಾಲೀಕರು ದಿಕ್ಕುತೋಚದ ಪರಿಸ್ಥಿತಿಯಲ್ಲಿದ್ದಾರೆ.

  ಶುಕ್ರವಾರ ಇಡಿ ದಿನ ಮೋಡಮುಸುಕಿದ ವಾತಾವರಣದ ಜತೆಗೆ ಅಲ್ಲಲಿ ತುಂತುರು ಮಳೆಯಾಗಿದೆ. ಇನ್ನು ಕೆಲವು ಕಡೆ ಗುಡುಗು ಬಿರುಗಾಳಿ ಆರ್ಭಟದ ಸದ್ದುಕೇಳಿಬಂದಿದೆ. ಮಳೆಯ ಜತೆಗೆ ಬಿರುಗಾಳಿ, ಆಲಿಕಲ್ಲು ಬಿದ್ದರೆ ಮಾವು ಸಲು ನೆಲಕಚ್ಚುವ ಸಂಭವವಿದೆ. ಮಾವು ಬೆಳಗಾರರಿಗೆ 4-5 ವರ್ಷಗಳಿಂದ ಫಸಲಿಗೆ ಉತ್ತಮ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಬಿಸಿಲಿನ ತಾಪಕ್ಕೆ ಫಸಲು ಕಡಿಮೆಯಾಗಿದೆ. ಉಳಿದ ಅಲ್ಪಸ್ವಲ್ಪ ಸಲಿಗೆ ಬೇಡಿಕೆ ಇದ್ದರೂ ಹವಾಮಾನ ವೈಪರೀತ್ಯ ಭೀತಿ ಎದುರಾಗಿದೆ.

  ಉತ್ತಮ ಬೆಲೆ
  ಮಾರುಕಟ್ಟೆಯಲ್ಲಿ ಪ್ರಸ್ತುತ ರಾಜಗೀರ್ ಟನ್‌ಗೆ 15 ಸಾವಿರದಿಂದ 30 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಬಾದಾಮ್ 30-50 ಸಾವಿರ ರೂ., ತೋತಾಪುರಿ ಕಲರ್ 30 ಸಾವಿರ ರೂ. ಮಾರಾಟವಾಗುತ್ತಿದೆ. ಪ್ರಥಮ ಬಾರಿಗೆ ಮಾರುಕಟ್ಟೆಗೆ ಈ ತಳಿಗಳು ಪ್ರವೇಶ ಮಾಡುತ್ತಿವೆ. ಪ್ರಾರಂಭದಲ್ಲಿ ಉತ್ತಮ ಬೆಲೆಯೂ ರೈತರಿಗೆ ಸಿಗುವಂತಾಗಿದೆ.

  ನಗರದೆಲ್ಲೆಡೆ ತುಂತುರು ಮಳೆ
  ಮುಳಬಾಗಿಲು: ನಗರ ಮತ್ತು ಗ್ರಾವಾಂತರ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮೋಡ ಮುಸಿಕಿದ ವಾತಾವರಣ ಉಂಟಾಗಿದ್ದು ಒಂದೆರಡು ಬಾರಿ ಜೋರು ಮಳೆ ಬಂದಿದ್ದು ಉಳಿದಂತೆ ತುಂತುರು ಮಳೆ ಬೀಳುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts