ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭ, ಕುಟುಂಬ ಸೌಖ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ಕಿರುಕುಳ. ಬಂಧು ಮಿತ್ರರಲ್ಲಿ ಮನಸ್ತಾಪ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 7

ವೃಷಭ: ವ್ಯರ್ಥ ಧನಹಾನಿ. ಅನಾರೋಗ್ಯ. ಕೃಷಿಕರಿಗೆ ಅಲ್ಪ ಲಾಭ. ಉದ್ಯೋಗದಲ್ಲಿ ನಷ್ಟ. ಚೋರಾಗ್ನಿ ಭೀತಿ. ಸಾಧಾರಣ ಫಲ. ಶುಭಸಂಖ್ಯೆ: 4

ಮಿಥುನ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ದುಷ್ಟ ಜನರ ಸಹವಾಸ. ಯತ್ನ ಕಾರ್ಯಗಳಲ್ಲಿ ವಿಘ್ನ. ಪುಣ್ಯಕ್ಷೇತ್ರ ದರ್ಶನ, ಅಧಿಕ ಖರ್ಚು. ಶುಭಸಂಖ್ಯೆ: 2

ಕಟಕ: ಅಧಿಕ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ. ಅಪಜಯ. ಮನಸ್ಸಿಗೆ ವ್ಯಥೆ. ಅಧಿಕಾರಿಗಳಿಂದ ತೊಂದರೆ, ಮಿಶ್ರ ಫಲ. ಶುಭಸಂಖ್ಯೆ: 5

ಸಿಂಹ: ಕುಟುಂಬ ಸೌಖ್ಯ. ಪರರಿಗೆ ವಂಚಿಸುವುದು ಒಳ್ಳೆಯದಲ್ಲ. ದುಷ್ಟ ಬುದ್ಧಿ. ಚರ್ಮವ್ಯಾಧಿ. ದ್ರವ್ಯನಾಶ, ಸಾಧಾರಣ ಫಲ. ಶುಭಸಂಖ್ಯೆ: 8

ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಕೆಲಸದಲ್ಲಿ ಜಯ. ಶ್ರಮಕ್ಕೆ ತಕ್ಕ ಫಲ. ಭೂಮಿ ಕೊಳ್ಳುವಿಕೆ. ವಾಹನ ಯೋಗವಿದೆ. ಶುಭಸಂಖ್ಯೆ: 3

ತುಲಾ: ದಾಯಾದಿ ಕಲಹ ಮಾನಸಿಕ ವೇದನೆ ತಂದೀತು. ತಾಯಿ ಕಡೆಯ ಬಂಧುಗಳಿಂದ ವಿನಾಕಾರಣ ಕಿರಿಕಿರಿ, ಅಪಕೀರ್ತಿ, ಶತ್ರು ಬಾಧೆ. ಶುಭಸಂಖ್ಯೆ: 7

ವೃಶ್ಚಿಕ: ಮಾತಾಪಿತೃಗಳಲ್ಲಿ ದ್ವೇಷ. ಸಲ್ಲದ ಅಪವಾದ ಬರಬಹುದು. ಮನಸ್ಸಿಗೆ ಬಾಧೆ. ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ. ಶುಭಸಂಖ್ಯೆ: 4

ಧನುಸ್ಸು: ಯತ್ನ ಕಾರ್ಯಾದಲ್ಲಿ ಅನುಕೂಲ. ಅನಾರೋಗ್ಯ. ಹಿತಶತ್ರುಗಳಿಂದ ತೊಂದರೆ, ಅಶಾಂತಿ. ಬಂಧುಗಳ ಭೇಟಿ, ದ್ರವ್ಯಲಾಭ. ಶುಭಸಂಖ್ಯೆ: 2

ಮಕರ: ಭೂಲಾಭವಾಗಿ ಸಮಾಧಾನ. ಪ್ರಿಯ ಜನರ ಭೇಟಿ, ಕೀರ್ತಿ ಲಾಭ. ಸತ್ಕಾರ್ಯಾಸಕ್ತಿ. ಅಮೂಲ್ಯ ವಸ್ತುಗಳ ಕೊಳ್ಳುವಿಕೆ. ಶುಭಸಂಖ್ಯೆ: 1

ಕುಂಭ: ಆಕಸ್ಮಿಕ ಧನಲಾಭ. ಸ್ವಲ್ಪ ಹಣ ಬಂದರೂ ವಿವಿಧ ಕಾರಣದಿಂದ ಉಳಿಯುವುದಿಲ್ಲ, ಋಣಭಾದೆ, ಕುಟುಂಬ ಸೌಖ್ಯ. ಶುಭಸಂಖ್ಯೆ: 6

ಮೀನ: ವಾದ-ವಿವಾದಗಳಲ್ಲಿ ಮೌನವಾಗಿರಿ. ತಾಳ್ಮೆ ಅಗತ್ಯ. ಅತಿಯಾದ ನಷ್ಟಗಳು. ಆರೋಗ್ಯದಲ್ಲಿ ತೊಂದರೆ. ಅಪಕೀರ್ತಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net