More

    ರಾಜಕಾಲುವೆ ಒತ್ತುವರಿ ತೆರವು ಮತ್ತೆ ಆರಂಭ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ರಾಜಧಾನಿಯಲ್ಲಿ ಮಳೆ ನೀರು ಹರಿವಿಗೆ ತೊಡಕಾಗಿರುವ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವ ಕಾರ್ಯಾಚರಣೆ ಮತ್ತೆ ಆರಂಭಿಸಲಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಳೆ ಅವಾಂತರದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸಾವಿಗೀಡಾದ್ದರಿಂದ ಸೇಂಟ್​ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಈ ವಿಷಯ ತಿಳಿಸಿದರು.

    ಬೆಂಗಳೂರಿನ ಇನ್​ಫೊಸಿಸ್ ಉದ್ಯೋಗಿ, ಆಂಧ್ರಪ್ರದೇಶ ಮೂಲದ ಭಾನುರೇಖಾ (22) ತನ್ನ ಹೊಸ ಮನೆ ನೋಡಲು ಊರಿನಿಂದ ಬಂದಿದ್ದ ಕುಟುಂಬಸ್ಥರನ್ನು ಇಂದು ಬೆಂಗಳೂರು ವೀಕ್ಷಣೆಗಾಗಿ ಕ್ಯಾಬ್​ನಲ್ಲಿ ಕರೆದುಕೊಂಡು ಬಂದಿದ್ದರು. ಆಗ ಅವರಿದ್ದ ಕ್ಯಾಬ್​ ಕೆ.ಆರ್​. ರಸ್ತೆಯ ನೀರು ತುಂಬಿದ್ದ ಅಂಡರ್​​ಪಾಸ್​ನಲ್ಲಿ ಸಿಲುಕಿ ಎಲ್ಲರೂ ತೊಂದರೆಗೆ ಒಳಗಾಗಿದ್ದರು. ಆ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ ಭಾನುರೇಖಾ ಬಳಿಕ ಸಾವಿಗೀಡಾದರು. ಸೇಂಟ್​ ಮಾರ್ಥಾಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ನಗರದಲ್ಲಿ ಪರಿಸ್ಥಿತಿ ವೀಕ್ಷಣೆಗೆ ರಸ್ತೆಗಿಳಿದಿದ್ದ ಸಿಎಂ ಸೇಂಟ್ ಮಾರ್ಥಾಸ್ ಆಸ್ಪತ್ರೆಗೂ ಭೇಟಿ ನೀಡಿದ್ದರು.

    ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ?

    ಅಲ್ಲಿ ಘಟನೆ ಕುರಿತು ಮಾಹಿತಿ ಪಡೆದ ಸಿಎಂ, ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಬಾಡಿಗೆ ವಾಹನ ಪಡೆದು ಬೆಂಗಳೂರು ನಗರ ನೋಡಲು ಬಂದಿದ್ದ ಆ ವಾಹನದಲ್ಲಿ ಚಾಲಕ ಸೇರಿ ಏಳು ಮಂದಿ ಇದ್ದರು. ಅವರಿಗೆ ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ, ಚಾಲಕ ಅಂಡರ್​​ಪಾಸ್ ಒಳಗೆ ಹೋಗಬಾರದಿತ್ತು. ನೀರಿನಲ್ಲಿ ಸಿಲುಕಿದ್ದ ವಾಹನದ ಬಾಗಿಲುಗಳನ್ನು ತೆರೆಯಲು ಆಗಿಲ್ಲ. ನೀರಿನ ಒತ್ತಡದಿಂದಾಗಿ ಗ್ಲಾಸ್​ ಸಹ ಜಾಮ್ ಆಗಿತ್ತು. ಭಾನುರೇಖಾ ಮಳೆನೀರು ಕುಡಿದು ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ತಲುಪುವ ಮುನ್ನವೇ ಅವರ ನಿಧನವಾಗಿತ್ತು. ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ಬಳಿಕ ಇನ್ನೊಮ್ಮೆ ತಪಾಸಣೆ ನಡೆಸಿದ್ದಾರೆ ಎಂದು ಸಿಎಂ ತಿಳಿಸಿದರು.

    ಇದನ್ನೂ ಓದಿ: ಎಷ್ಟು ಕೋರಿಕೊಂಡರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ; ವೈದ್ಯರು-ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ

    ವಿಪರೀತ ನೀರು ತುಂಬಿಕೊಂಡ ಸಂದರ್ಭ ಇಲ್ಲಿನ ಸಂಚಾರವನ್ನು ಬಂದ್ ಮಾಡಬೇಕು. ಆದರೆ ಅನಿರೀಕ್ಷಿತವಾಗಿ ಮಳೆ ಬಂದು ಏಕಾಏಕಿ ನೀರು ತುಂಬಿದೆ. ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನೂ ಆಗಿಲ್ಲ, ಚಾಲಕ ಸಹ ಸುರಕ್ಷಿತವಾಗಿದ್ದಾನೆ. ಆಸ್ಪತ್ರೆಯಿಂದ ವಿಳಂಬವಾಗಿದ್ದರೆ ಅದನ್ನು ವಿಚಾರಣೆ ಮಾಡೋಣ. ಆಸ್ಪತ್ರೆಯವರು ನಿರ್ಲಕ್ಷ ಮಾಡಿದ್ದರೆ ಅವರ ವಿರುದ್ಧ ತನಿಖೆ ನಡೆಸುತ್ತೇವೆ. ಸದ್ಯ ಆಸ್ಪತ್ರೆ ವೈದ್ಯರು ಅಂಥ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಹೇಳಿದ್ದಾರೆ. ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸುತ್ತಿದ್ದೇನೆ. ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ ಎಂದ ಸಿಎಂ, ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ರಾಜಕಾಲುವೆ ಒತ್ತುವರಿ ತೆರವನ್ನು ನಾವು ಹಿಂದೆ ಆರಂಭಿಸಿದ್ದೆವು. ಆದರೆ ಅದು ಅರ್ಧಕ್ಕೆ ನಿಂತಿದೆ, ಮತ್ತೊಮ್ಮೆ ಆರಂಭಿಸುತ್ತೇವೆ ಎಂದರು.

    ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?

    ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts