ಈ ರಾಶಿಯವರಿಗಿಂದು ಸ್ನೇಹಿತರೊಂದಿಗೆ ಔತಣ ಕೂಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಂದೆಯ ಆರೋಗ್ಯದ ವಿಷಯದಲ್ಲಿ ಎಚ್ಚರ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಪ್ರೇಮಿಗಳಲ್ಲಿ ಮನಸ್ತಾಪ. ಶುಭಸಂಖ್ಯೆ:9

ವೃಷಭ: ಕುಟುಂಬದಲ್ಲಿ ನೆಮ್ಮದಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಮಾತಿನಿಂದ ತೊಂದರೆ. ಸಣ್ಣ ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ:1

ಮಿಥುನ: ಮಹಿಳೆಯರಿಗೆ ಕಚೇರಿಯಲ್ಲಿ ಗೌರವ. ಕುಟುಂಬದ ಸಮಾರಂಭದಲ್ಲಿ ಭಾಗಿ. ಕೆಲಸದಲ್ಲಿ ತೊಂದರೆ. ಸ್ವಂತ ಉದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ:2

ಕಟಕ: ಗೃಹಿಣಿಯರಿಗೆ ಫಲದಾಯಕ ದಿನ. ಪತ್ನಿಗೆ ಉದ್ಯೋಗದಲ್ಲಿ ಶುಭ. ಲೋಹ ಸಂಬಂಧ ಉದ್ಯೋಗದಲ್ಲಿ ಆದಾಯ ಬರುವುದು. ಶುಭಸಂಖ್ಯೆ:6

ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗುವುದು. ವ್ಯಾಪಾರ ವ್ಯವಹಾರದಲ್ಲಿ ಮೋಸ ಸಂಭವ. ಸಂಜೆ ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ:3

ಕನ್ಯಾ: ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ಕೃಷಿಕರಿಗೆ ಸಂತೋಷದ ದಿನ. ಸ್ನೇಹಿತರೊಂದಿಗೆ ಔತಣ ಕೂಟ. ಶುಭಸಂಖ್ಯೆ:4

ತುಲಾ: ಯಂತ್ರ ತಯಾರಿಕೆಗೆ ಪೋ›ತ್ಸಾಹ. ಹಿರಿಯ ಅಧಿಕಾರಿಗಳಿಂದ ತೊಂದರೆ. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:4

ವೃಶ್ಚಿಕ: ಗೃಹ ಕೈಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ. ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಆದಾಯ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ: 7

ಧನುಸ್ಸು: ಶೀತ ಸಂಬಂಧೀ ರೋಗ. ಹೈನುಗಾರಿಕೆಯಲ್ಲಿ ಆದಾಯ. ಅನಿರೀಕ್ಷಿತ ಧನ ಲಾಭ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಕರ: ಆತ್ಮೀಯರ ಸಲಹೆ, ಮಾರ್ಗದರ್ಶನದಿಂದ ಯಶ. ರಕ್ತದೊತ್ತಡ ಸಮಸ್ಯೆ. ಸರ್ಕಾರಿ ನೌಕರರಿಗೆ ಬೆಂಬಲ. ತಾಯಿಯ ಸಹಕಾರ. ಶುಭಸಂಖ್ಯೆ:2

ಕುಂಭ: ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ. ಕೃಷಿಯಲ್ಲಿ ಲಾಭ ಬರುವುದು. ವಿದ್ಯಾರ್ಥಿಗಳಲ್ಲಿ ಗೊಂದಲ. ವಿದೇಶ ಪ್ರಯಾಣ. ಶುಭಸಂಖ್ಯೆ: 5

ಮೀನ: ಛಾಯಾಗ್ರಾಹಕರಿಗೆ ಶುಭದಾಯಕ ದಿವಸ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಸಾಧ್ಯತೆ. ತಾಳ್ಮೆಯಿಂದಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net