More

    ಹಾಸನಾಂಬೆ ಉತ್ಸವ: ಇದ್ದಿದ್ದು ಎರಡೇ ವಾರ, ಬಂದ ಆದಾಯ ಕೋಟಿಗಟ್ಟಲೆ; ಇದು ಇಲ್ಲಿನ ಇತಿಹಾಸದಲ್ಲೇ ದಾಖಲೆ!

    ಬೆಂಗಳೂರು: ವರ್ಷಕ್ಕೊಮ್ಮೆ ಕೆಲವೇ ದಿನಗಳ ಕಾಲ ದರ್ಶನ ಸಿಗುವಂಥ ಹಾಸನಾಂಬೆ ದೇವಸ್ಥಾನದಲ್ಲಿ ಈ ವರ್ಷದ ಆದಾಯ ಎಣಿಕೆ ಕಾರ್ಯ ಮುಗಿದಿದ್ದು, ಕೋಟಿಗಟ್ಟಲೆ ಹಣ ಸಂಗ್ರಹವಾಗಿದೆ. ಅಂದರೆ ಬರೀ ಎರಡು ವಾರಗಳಲ್ಲೇ ಎಂಟು ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

    ನ. 2ರಂದು ಶುರುವಾದ ಹಾಸನಾಂಬೆ ಉತ್ಸವ ನಿನ್ನೆ ಮುಕ್ತಾಯಗೊಂಡಿದ್ದು, ಇಂದು ಪೊಲೀಸರ ಬಿಗಿ ಬಂದೋಬಸ್ತ್​ನಲ್ಲಿ ಹುಂಡಿ ಹಣ ಸೇರಿದಂತೆ ಆದಾಯ ಎಣಿಕೆ ಕಾರ್ಯ ಮುಗಿದಿದೆ. ಕಳೆದ 12 ದಿನಗಳಲ್ಲಿ ಕ್ಷೇತ್ರಕ್ಕೆ 13 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದು, 8.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

    ವಿಶೇಷವೆಂದರೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಸಲ ಗರಿಷ್ಠ ಆದಾಯ ಸಂಗ್ರಹವಾಗಿದ್ದು, ಇದು ದಾಖಲೆ ಎನಿಸಿಕೊಂಡಿದೆ. ಈ ಸಲದ ಉತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಒಟ್ಟು 8,72,41,531 ಕೋಟಿ ರೂ. ಆದಾಯ ಬಂದಿದೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಆ ಪೈಕಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹಗೊಂಡಿದೆ. ವಿಶೇಷ ದರ್ಶನದ ಸಾವಿರ, ಮುನ್ನೂರು ರೂ. ಟಿಕೆ‌ಟ್, ಲಾಡು ಮಾರಾಟದಿಂದಲೇ ಬರೋಬ್ಬರಿ 6.17 ಕೋಟಿ ಲಕ್ಷ ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 2,50,77,497 ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

    ಕಳೆದ ವರ್ಷ ಹಾಸನಾಂಬೆ ಉತ್ಸವ ಸಂದರ್ಭದಲ್ಲಿ ಮೂರೂವರೆ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಗೊಂಡಿದ್ದು, 60ಕ್ಕೂ ಅಧಿಕ ಮಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಮುಂದಿನ ವರ್ಷ ಯಾವಾಗ ಉತ್ಸವ?: ಹಾಸನಾಂಬೆಯ ಮುಂದಿನ ವರ್ಷದ ಉತ್ಸವಕ್ಕೂ ಈಗಾಗಲೇ ದಿನಾಂಕ ನಿಗದಿಯಾಗಿದೆ. 2024ರಲ್ಲಿ ಅ. 24ರಿಂದ ನ. 3ರವರೆಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆಯ ದರ್ಶನ ಲಭ್ಯವಿರಲಿದೆ.

    ವಿಶ್ವಕಪ್ ಕ್ರಿಕೆಟ್​, ಇಂದು ಗೆಲುವು ಯಾರಿಗೆ?: ಇಲ್ಲಿದೆ ಮಾಹಿತಿ; ಈತ ನಿನ್ನೆಯ ಸೆಮಿಫೈನಲ್ ಬಗ್ಗೆ ಮೊನ್ನೆ ಹೇಳಿದ್ದೂ ನಿಜವಾಗಿತ್ತು!

    ‘ತಾ ಕಳ್ಳ, ಇತರರ ನಂಬ’: ಮಾಜಿ ಸಿಎಂ ವಿರುದ್ಧ ಸಿಎಂ ವಾಗ್ದಾಳಿ; ವಿಷಯ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts