ಕೋಲ್ಕತ: ಏಕದಿನ ವಿಶ್ವಕಪ್ನ ಎರಡನೇ ಸೆಮಿಫೈನಲ್ ಕ್ರಿಕೆಟ್ ಕಾಶಿ ಎಂದೇ ಹೇಳಲಾಗುವ ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ತಂಡಗಳ ಮಧ್ಯೆ ನಡೆಯುತ್ತಿದೆ. ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ-ಲೆಕ್ಕಾಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದ್ದು, ಆಸಕ್ತಿಕರ ಸಂಗತಿಯೊಂದು ಹೊರಬಿದ್ದಿದೆ.
ಇಂದು ಯಾವ ಟೀಮ್ ಗೆಲ್ಲಲಿದೆ ಎಂಬ ಬಗ್ಗೆ ಇಲ್ಲೊಬ್ಬ ವ್ಯಕ್ತಿ ಭವಿಷ್ಯ ನುಡಿದಿದ್ದು, ಈತನ ಮಾತಿನ ಕುರಿತು ಬಹಳಷ್ಟು ಮಂದಿ ಕೌತುಕ ಹೊಂದಿದ್ದು, ಇಂದೂ ಈತ ಹೇಳಿದಂತೆಯೇ ಆಗಲಿದೆಯಾ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಏಕೆಂದರೆ ಡಾನ್ ಮಟೆಯೊ ಎಂಬ ಈತ ಮೊನ್ನೆ ಕಂಡಿದ್ದ ಕನಸು ನಿನ್ನೆ ನಿಜವಾಗಿತ್ತು. ಅರ್ಥಾತ್, ಭಾರತ ನ್ಯೂಜಿಲೆಂಡ್ ಮಧ್ಯೆ ನಡೆದ ಸೆಮಿಫೈನಲ್ನಲ್ಲಿ ಶಮಿ ಏಳು ವಿಕೆಟ್ ಪಡೆದಿದ್ದನ್ನು ಕನಸಿನಲ್ಲಿ ಕಂಡೆ ಎಂಬುದಾಗಿ ಈತ ಪಂದ್ಯ ನಡೆಯಲಿರುವ ಹಿಂದಿನ ದಿನ ಹೇಳಿದ್ದ. ಈತ ಹೇಳಿದಂತೆ ನಿನ್ನೆ ಶಮಿ ಏಳು ವಿಕೆಟ್ ಪಡೆದುಕೊಂಡಿದ್ದರು. ಕಾಕತಾಳೀಯ ಎಂಬಂತೆ ಇದು ನಿಜವಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದ್ದು, ಇಂದು ಬಹಳಷ್ಟು ಮಂದಿ ಈತನ ಎಕ್ಸ್ ಹ್ಯಾಂಡಲ್ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಇಂದು ಯಾವುದೇ ಕನಸು ಬಿದ್ದಿಲ್ಲ. ಆದರೆ ಸಾಮಾನ್ಯ ಅನಿಸಿಕೆ ಪ್ರಕಾರ ಇಂದು ಟಾಸ್ ಗೆದ್ದ ತಂಡವೇ ಪಂದ್ಯವನ್ನು ಗೆಲ್ಲಲಿದೆ. ಮಳೆಯೂ ಈ ನಿಟ್ಟಿನಲ್ಲಿ ಪರಿಣಾಮ ಬೀರುವ ಸಾಧ್ಯತೆ ಎಂಬಂಥ ಮಾಹಿತಿಯನ್ನು ಡಾನ್ ಮಟೆಯೊ ಇಂದು ಮಧ್ಯಾಹ್ನವೇ ಹಂಚಿಕೊಂಡಿದ್ದಾನೆ.
ಅಚ್ಚರಿ ಎಂದರೆ ಈತ ಹೇಳಿದಂತೆಯೇ ಮಳೆ ಬಂದು ಪಂದ್ಯ ತಾತ್ಕಾಲಿಕ ಸ್ಥಗಿತ ಕಂಡಿದೆ. ಈತನ ಎಕ್ಸ್ ಪೋಸ್ಟ್ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದು, ಶಮಿಯ ವಿಚಾರವಾಗಿ ಹೇಳಿದಂತೆ ಇಂದು ಯಾವ ತಂಡ ಗೆಲ್ಲಲಿದೆ ಎಂಬ ವಿಚಾರವಾಗಿ ಹೇಳಿದ ಮಾತು ಕೂಡ ನಿಜವಾಗಲಿದೆಯಾ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.
Didn't dream anything today btw but general feeling says team winning the toss will win the game. Rain around will throw more permutations into the mix!
— Don Mateo (@DonMateo_X14) November 16, 2023
ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!