ಈ ರಾಶಿಯವರಿಂದು ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ, ವಸ್ತ್ರ ವ್ಯಾಪಾರದಲ್ಲಿ ಲಾಭ

Nithya Bhavishya
Published on

ಮೇಷ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ. ವ್ಯಾಪಾರಿಗಳಿಗೆ ಉತ್ತಮ ಕಾಲ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 5

ವೃಷಭ: ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ. ವಾಹನ ವ್ಯಾಪಾರದಲ್ಲಿ ನಷ್ಟವಾಗುವ ಸಂಭವ. ಹಾಲು ಉತ್ಪಾದಕರಿಗೆ ಶುಭ. ಶುಭಸಂಖ್ಯೆ:3

ಮಿಥುನ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು. ವಸ್ತ್ರ ವಿನ್ಯಾಸಕರಿಗೆ ಬೇಡಿಕೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆ, ಸರಸ್ವತಿಯನ್ನು ಧ್ಯಾನಿಸಿ. ಶುಭಸಂಖ್ಯೆ: 6

ಕಟಕ: ತರಕಾರಿ ವ್ಯಾಪಾರದಲ್ಲಿ ನಷ್ಟ ಸಂಭವ. ಹಣ್ಣಿನ ವ್ಯಾಪಾರದಲ್ಲಿಯೂ ಹಿನ್ನಡೆ. ಆರೋಗ್ಯದ ತೊಂದರೆ ಸುಧಾರಿಸಿ ಸಮಾಧಾನ. ಶುಭಸಂಖ್ಯೆ: 1

ಸಿಂಹ: ಕಣ್ಣಿನ ಸಮಸ್ಯೆಯುಂಟಾಗುತ್ತದೆ. ವಿದೇಶ ಪ್ರವಾಸದ ಯೋಜನೆ ಹಾಕಿಕೊಳ್ಳುವಿರಿ. ಉದ್ಯೋಗ ಬದಲಿಸುವ ಸಾಧ್ಯತೆಯಿದೆ. ಶುಭಸಂಖ್ಯೆ: 9

ಕನ್ಯಾ: ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ. ಮೂಳೆಗಳ ಸಮಸ್ಯೆ ಬಾಧಿಸುತ್ತದೆ. ತಜ್ಞ ವೈದ್ಯರನ್ನು ಸಂರ್ಪಸಿ. ಮಾನಸಿಕ ಕಿರಿಕಿರಿ. ಶುಭಸಂಖ್ಯೆ: 3

ತುಲಾ: ರಕ್ತದೊತ್ತಡದ ಸಮಸ್ಯೆ. ನಿರ್ಧಾರಗಳ ಬದಲಾವಣೆ ಯಿಂದ ಕೆಲಸಗಳಲ್ಲಿ ಹಿನ್ನಡೆ. ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಶುಭಸಂಖ್ಯೆ: 4

ವೃಶ್ಚಿಕ: ಆದಾಯಕ್ಕೆ ತಕ್ಕಂತೆ ವೆಚ್ಚವೂ ಇದೆ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ. ಶುಭಸಂಖ್ಯೆ: 8

ಧನುಸ್ಸು: ಬಟ್ಟೆಗಳ ವ್ಯಾಪಾರದಲ್ಲಿ ಲಾಭ. ಮಕ್ಕಳ ಆಟಿಕೆಗಳ ವ್ಯಾಪಾರದಲ್ಲಿ ಯಶ. ಸೋಲು-ಗೆಲುವು ಸಮಾನವಾಗಿರುತ್ತದೆ. ಶುಭಸಂಖ್ಯೆ: 1

ಮಕರ: ಕೃಷಿಕರಿಗೆ ಉತ್ಪನ್ನಗಳಲ್ಲಿ ಉತ್ತಮ ಆದಾಯ. ಮನೋವ್ಯಥೆ ಕಾಡಬಹುದು. ಸಾಲದಿಂದ ಮುಕ್ತಿ ಹೊಂದಿ ಆರ್ಥಿಕ ಸಮಾಧಾನ. ಶುಭಸಂಖ್ಯೆ: 2

ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಸ್ತ್ರ ವ್ಯಾಪಾರದಲ್ಲಿ ಲಾಭ. ಆದಾಯದಷ್ಟೇ ಖರ್ಚು. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 9

ಮೀನ: ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ ದೊರೆಯುವುದು. ಶಿಕ್ಷಕರಿಗೆ ಒಳ್ಳೆಯ ದಿನ. ಸಂಬಂಧಗಳಲ್ಲಿ ಭಿನ್ನತೆ. ಸಮಾಧಾನಚಿತ್ತರಾಗಿರಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net