ಕಾಂಗ್ರೆಸ್​​ನ ಭ್ರಷ್ಟಾಚಾರದ ಕಥೆ ಹೇಳಲು ಶುರು ಮಾಡಿದ್ರೆ ಮುಗಿಯೋಕೆ 2 ದಿನ ಬೇಕು; ಬಿ.ಎಸ್ ಯಡಿಯೂರಪ್ಪ

BSY
Published on

ಬಳ್ಳಾರಿ: ಜನಸಂಕಲ್ಪ ಯಾತ್ರೆಯಲ್ಲಿ ಮಾನಾಡುತ್ತಾ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್​ ಅಂದರೆ ಭ್ರಷ್ಟಾಚಾರದ ಜನನಿ. ಕಾಂಗ್ರೆಸ್​​ನವರು ಮಾಡಿರುವ ಭ್ರಷ್ಟಾಚಾರಕ್ಕೆ ಇತ್ತೀಚೆಗೆ ಕಾಂಗ್ರೆಸ್​​ನ ರಮೇಶ್​​ ಕುಮಾರ್ ಆಡಿರುವ ಮಾತುಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರು ಅಂಬೇಡ್ಕರ್​ ಅವರಿಗೆ ಭಾರತ ರತ್ನ ನೀಡದೆ ಅನ್ಯಾಯ ಮಾಡಿದರು. ಸಿದ್ದರಾಮಯ್ಯ ಜಿ. ಪರಮೇಶ್ವರ್ ಅವರ ಸೋಲಿಗೆ ಕಾರಣರಾದರು. ರಾಹುಲ್ ಗಾಂಧಿಯನ್ನೇ ಕೇಳಿ ನೋಡಿ, ನಿಮ್ಮ ತಾಯಿ ಜನರಿಗೆ ಎನು ಮಾಡಿದರೆಂದು? ರಾಹುಲ್ ಮಾಡುತ್ತಿರುವ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಎಸ್​​ವೈ ಹೇಳಿದ್ದಾರೆ.

ನಾವು ಎಸ್ಸಿಎಸ್ಟಿ ಜನಾಂಗದ ದ್ರೌಪದಿ ಮುರ್ಮು ಅವರನ್ನು ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಎಸ್ಸಿಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿರೋದು ಬಿಜೆಪಿ. ನಮ್ಮ ಸರ್ಕಾರ ರೈತರಿಗೆ, ಮಹಿಳೆಯರಿಗೆ ಅನೇಕ ಸೌಲಭ್ಯ ಮಾಡಿಕೊಟ್ಟಿದೆ. ಪೂರ್ಣವಾಗದೇ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಮೊದಲು ದೆಹಲಿಯಿಂದ ಒಂದು ರೂಪಾಯಿ ಕೊಟ್ಟರೆ, ತಲುಪುವಾಗ ನಾಲ್ಕಾಣೆ ಬರುತ್ತಿತ್ತು. ಈಗ ನೇರವಾಗಿ ಪೂರ್ತಿ ಹಣ ಜನರ ಖಾತೆಗೆ ಬರುತ್ತಿದೆ. ನರೇಂದ್ರ ಮೋದಿಯೆಂಬ ದೈವ ಪುರುಷನಿಂದ ಇದೆಲ್ಲ ಸಾಧ್ಯವಾಗಿದೆ. ಅವರು ನಮ್ಮ ಪ್ರಧಾನಿಯಾಗಿರುವುದ ನಮ್ಮೆಲ್ಲರ ಸೌಭಾಗ್ಯ. ನಾನು ಮತ್ತು ಬೊಮ್ಮಾಯಿ ಅವರು ನೀಡಿರುವ ಯೋಜನೆಗಳನ್ನು ಜನರ ಮನೆಮನಗೆ ಹೋಗಿ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್​​ನವರ ಭ್ರಷ್ಟಾಚಾರದ ಕತೆ ಹೇಳಲು ಆರಂಭಿಸಿದರೆ, ಪೂರ್ಣವಾಗಲು ಎರಡು ದಿನ ಬೇಕು. 150 ಕ್ಷೇತ್ರ ಗೆದ್ದು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಜನವಿರೋಧಿ ಸರ್ಕಾರ ಅಧಿಕಾರಕ್ಕೆ ಬರದಂತೆ ತಡೆಯುತ್ತೇನೆ. ಚುನಾವಣೆ ಮುಗಿಯುವವರೆಗೂ ರಾಜ್ಯಾದ್ಯಂತ ಓಡಾಡುತ್ತೇನೆ ಎಂದು ಬಿಎಸ್​ವೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net