

ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸುವುದು. ಭಾರತ ಐಕ್ಯತಾ ಯಾತ್ರೆ ಬಿಜೆಪಿ ನಾಯಕರ ಎದೆ ನಡುಗಿಸಿದೆ. ಹೀಗಾಗಿ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ. ಈ ಯಾತ್ರೆಯ ಉದ್ದೇಶವೇನು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶ ಜನರಿಲ್ಲದೆ ಸೋತು ಹೋಯಿತು. ಈಗ ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಬಿಎಸ್ವೈ, ಬೊಮ್ಮಾಯಿ ಹಾಗೂ ಕಟೀಲ್ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ? ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಯಾತ್ರೆಯೇ ಎಂದು ಪ್ರಶ್ನಿಸಿದ್ದಾರೆ.
2018 ರ ಪ್ರಣಾಳಿಕೆಯಲ್ಲಿ ಬಿಜೆಪಿ 600ಕ್ಕೂ ಹೆಚ್ಚು ಆಶ್ವಾಸನೆ ನೀಡಿತ್ತು. ಆ ಆಶ್ವಾಸನೆಗಳೆಲ್ಲ ಏನಾಯ್ತು? ಪ್ರಣಾಳಿಕೆ ಈಡೇರಿಸುವ ಸಂಕಲ್ಪ ಹಳ್ಳ ಹಿಡಿದಿದೆ. ಈಗ ಜನಸಂಕಲ್ಪ ಯಾತ್ರೆ ಎಂಬ ಹೊಸ ನಾಟಕವನ್ನು ಬಿಜೆಪಿ ಆರಂಭಿಸಿದೆ. ಇದು ಕಾಂಗ್ರೆಸ್ನ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟು ಬಿಜೆಪಿ ಮಾಡುತ್ತಿರುವ ಯಾತ್ರೆ ಎಂದು ಹೇಳಿದ್ದಾರೆ.