

ಅಮೇರಿಕಾ: ಹರಾಜು ಪ್ರಕ್ರಿಯೆ ನಡೆದಾಗ ಯಾವ ವಸ್ತು ಎಷ್ಟು ಬೆಲೆಗೆ ಮಾರಾಟವಾಗುತ್ತದೆ ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಈ ವಸ್ತು ದೊಡ್ಡ ಮೊತ್ತದಲ್ಲಿ ಹರಾಜಾಗುತ್ತದೆ ಎಂದುಕೊಂಡಿದ್ದರೆ ಲೆಕ್ಕಾಚಾರಾವೇ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಇದೀಗ ಇಂತದ್ದೇ ಪ್ರಸಂಗವೊಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ ನಡೆದಿದೆ.
ಹೌದು, ಇದೀಗ 1880ರ ಕಾಲದ ಜೀನ್ಸ್ ಪ್ಯಾಂಟ್ ಆಶ್ಚರ್ಯಕರ ಮೊತ್ತಕ್ಕೆ ಹರಾಜಾಗಿದೆ. 142 ವರ್ಷ ಹಳೆಯದಾದ ಜೀನ್ಸ್ಪ್ಯಾಂಟ್ 62 ಲಕ್ಷಕ್ಕೆ ಹರಾಜಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ, ಹರಾಜಿನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.
ಸ್ಯಾನ್ ಡಿಯಾಗೋದಲ್ಲಿ 23 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಕೈಲ್ ಹಾಪರ್ಟ್ ಎಂಬುವರು ಇಷ್ಟು ದೊಡ್ಡ ಮೊತ್ತ ನೀಡಿ 1880ರ ಕಾಲದ ಜೀನ್ಸ್ ಪ್ಯಾಂಟ್ ಕೊಂಡುಕೊಂಡಿದ್ದಾರೆ. ಈ ಜೀನ್ಸ್ ಪ್ಯಾಂಟನ್ನು ಹರಾಜಿನಲ್ಲಿ ಪಡೆದುಕೊಂಡು ಆಶ್ಚರ್ಯಚಕಿತನಾಗಿದ್ದೇನೆ ಎಂದು ಕೈಲ್ ಹಾಪರ್ಟ್ ಹೇಳಿದ್ದಾರೆ. (ಏಜೆನ್ಸೀಸ್)