ಈ ರಾಶಿಯವರಿಗಿಂದು ಆರ್ಥಿಕ ಅನುಕೂಲ ಒದಗಿಬರಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೌಟುಂಬಿಕ ಕಲಹ ಉಂಟಾಗಬಹುದು. ಸಭೆ- ಸಮಾರಂಭದಲ್ಲಿ ಉಪಸ್ಥಿತಿ. ಆಪ್ತಸ್ನೇಹಿತರೊಂದಿಗೆ ಸಮಾಲೋಚನೆ ನಡೆಸುವಿರಿ. ಶುಭಸಂಖ್ಯೆ: 7

ವೃಷಭ: ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ದೇವತಾದರ್ಶನ ಮಾಡುವಿರಿ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸುವುದು. ಶುಭಸಂಖ್ಯೆ:1

ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿಯಾಗಲಿದೆ. ದುಂದು ವೆಚ್ಚವನ್ನು ನಿಯಂತ್ರಿಸುವುದು ಅನಿವಾರ್ಯ. ಸ್ಥಿರಾಸ್ತಿ ನಷ್ಟವಾಗುವ ಸಾಧ್ಯತೆ. ಶುಭಸಂಖ್ಯೆ: 3

ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ ಉಂಟಾಗುವುದು. ಕೈಗಾರಿಕಾ ರಂಗದವರಿಗೆ ಶುಭ ದಾಯಕ ದಿನ. ಮಾನಸಿಕ ಅಶಾಂತಿ. ಶುಭಸಂಖ್ಯೆ: 4

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಸಾಹಿತಿ, ಕವಿಗಳಿಗೆ ಗೌರವ ಪ್ರಾಪ್ತಿ. ಆರ್ಥಿಕವಾಗಿ ಹಿನ್ನಡೆ. ಇಷ್ಟ ದೇವರ ಮೊರೆ ಹೋಗಿ. ಶುಭಸಂಖ್ಯೆ: 8

ಕನ್ಯಾ: ಮನೋ ವೈರಾಗ್ಯ ಕಾಡುವುದು. ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ ದಟ್ಟವಾಗಿದೆ. ಬಂಧುಮಿತ್ರರು ಮನೆಗೆ ಆಗಮಿಸುವರು. ಶುಭಸಂಖ್ಯೆ: 3

ತುಲಾ: ಅತಿಯಾದ ಕೆಲಸದ ಒತ್ತಡ. ಭೂ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗುವುದು. ದೇಹಾಲಸ್ಯ. ಕುಲದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 8

ವೃಶ್ಚಿಕ: ಗೊಂದಲಗಳ ನಿವಾರಣೆಯಾಗಲಿದೆ. ಹಣದ ಒಳಹರಿವು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಶತ್ರುಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 2

ಧನುಸ್ಸು: ವಿದ್ಯಾರ್ಜನೆಗಾಗಿ ಪ್ರಯಾಣ ಮಾಡಬೇಕಾಗುವುದು. ವೈದ್ಯರಿಗೆ ಶುಭಕರವಾದ ದಿನ. ಮಕ್ಕಳಿಂದ ತೊಂದರೆ ಉಂಟಾಗಬಹುದು. ಶುಭಸಂಖ್ಯೆ: 9

ಮಕರ: ಸಾಲ ಮರುಪಾವತಿ ಮಾಡಿದ ಸಮಾಧಾನ. ಶ್ರಮಕ್ಕೆ ತಕ್ಕ ಲಾಭ ದೊರೆಯಲಿದೆ. ಹಿರಿಯರೊಂದಿಗೆ ಅನವಶ್ಯಕ ಜಗಳ ಬೇಡ. ಶುಭಸಂಖ್ಯೆ: 6

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಉಂಟಾಗಲಿದೆ. ಆರ್ಥಿಕ ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 6

ಮೀನ: ಮಕ್ಕಳಿಂದ ಧನಾಗಮನ. ಮಾತಿನಿಂದ ಸಮಸ್ಯೆ ಯಾದೀತು. ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸುವುದು ಅಪೇಕ್ಷಣೀಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net