More

    ‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

    ಬೆಂಗಳೂರು: ‘ನಮಸ್ಕಾರ ದೇವರು’ ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ. ಬ್ರೋ (ಗಗನ್ ಶ್ರೀನಿವಾಸ್​) ಈಗ ಮ್ಯಾನ್ ಆಫ್ ಮಿಲಿಯನ್ಸ್ ಆಗಿದ್ದಾರೆ. ಅರ್ಥಾತ್, ಯೂ-ಟ್ಯೂಬ್​ನಲ್ಲಿ ಅವರ ಸಬ್​ಸ್ಕ್ರೈಬರ್ಸ್​ ಸಂಖ್ಯೆ 2 ಮಿಲಿಯನ್ (20) ಲಕ್ಷ ಆಗಿದೆ. ಮಾತ್ರವಲ್ಲ, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲೂ ಅವರ ಫಾಲೋವರ್ಸ್ ಸಂಖ್ಯೆ ಈಗಾಗಲೇ ಮಿಲಿಯನ್ ದಾಟಿದೆ.

    ಇದನ್ನೂ ಓದಿ: ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಇತ್ತೀಚೆಗಷ್ಟೇ ಯೂಟ್ಯೂಬ್​ನಲ್ಲಿ 2 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಹೊಂದಿದ ಡಾ.ಬ್ರೋ, ಫೇಸ್​ಬುಕ್​ನಲ್ಲಿ 1.6 ಮಿಲಿಯನ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ 1.3 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ. ಇನ್ನೊಂದೆಡೆ ಎಕ್ಸ್​ನಲ್ಲೂ ಇತ್ತೀಚೆಗೆ ಸಕ್ರಿಯರಾಗಿರುವ ಅವರಿಗೆ ಅಲ್ಲಿಯೂ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗುತ್ತಿದೆ.

    ಇದನ್ನೂ ಓದಿ: ಡಾ.ಬ್ರೋಗೆ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್; ‘ದೇವರ’ ಬಗ್ಗೆ ಏನಂದ್ರು ಗಗನ್ ಶ್ರೀನಿವಾಸ್?; ಇಲ್ಲಿದೆ ಫಸ್ಟ್ ರಿಯಾಕ್ಷನ್

    ಕಳೆದ ವರ್ಷ ಡಿಸೆಂಬರ್​ನಲ್ಲಿ ಯೂಟ್ಯೂಬ್​ನಲ್ಲಿ ಡಾ.ಬ್ರೋ ಸಬ್​ಸ್ಕ್ರೈಬರ್ಸ್ ಸಂಖ್ಯೆ 1 ಮಿಲಿಯನ್ ದಾಟಿತ್ತು. ಅದಾಗಿ 8 ತಿಂಗಳು ಕಳೆಯುವಷ್ಟರಲ್ಲಿ ಇನ್ನೂ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್ ಹೊಂದಿರುವ ಗಗನ್ ಶ್ರೀನಿವಾಸ್, ಯೂಟ್ಯೂಬ್​ನಲ್ಲೀಗ 2 ಮಿಲಿಯನ್ ಸಬ್​ಸ್ಕ್ರೈಬರ್​ಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಬ್ರೋ ಕ್ರೇಝ್ ಹೆಚ್ಚಾಗಿರುವುದು ಕೂಡ ಕಂಡುಬಂದಿದೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts