ಮುಂದಿನ ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ; ದಿನಾಂಕವೂ ನಿಗದಿ, ಇಲ್ಲಿದೆ ವಿವರ..

Modi Rama mandir
Published on

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ವೈಭವೋಪೇತ ಶ್ರೀರಾಮಮಂದಿರದ ಉದ್ಘಾಟನೆ ಮುಂದಿನ ಜನವರಿಯಲ್ಲೇ ನಡೆಯಲಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಈ ಮಂದಿರವನ್ನು ಉದ್ಘಾಟನೆ ಮಾಡಲಿರುವ ಮಾಹಿತಿ ಹೊರಬಿದ್ದಿದೆ.

2024ರ ಜನವರಿ 22ರಂದು ಶ್ರೀರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆಗೆ ಇತರ ಪ್ರಮುಖ ಖಾತೆಗಳ ಸಚಿವವರು, ಗಣ್ಯರು, ನಾಯಕರು ಮುಂತಾದವರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು 2 ವರ್ಷಗಳಿಂದ ಈ ಮಂದಿರದ ನಿರ್ಮಾಣ ನಡೆಯುತ್ತಿದೆ. ಪ್ರಧಾನಿ ಮೋದಿ 2020ರ ಆ. 5ರಂದು ಈ ಮಂದಿರಕ್ಕೆ ಗುದ್ದಲಿ ಪೂಜೆ ನಡೆಸಿದ್ದರು. ನೂತನ ಮಂದಿರದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗೆ, ಅನ್ನಪೂರ್ಣ, ಹನುಮಾನ್ ದೇವರ ಪ್ರತಿಷ್ಠಾಪನೆಯೂ ಇರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net