More

    ‘ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ’ ಎಂದು ಪತ್ರ ಬರೆದಿಟ್ಟು ಹೋದಾಕೆ ಇನ್ನೂ ನಾಪತ್ತೆ!

    ಕೊಡಗು: ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಹೋದ ಮಹಿಳೆ ಇನ್ನೂ ನಾಪತ್ತೆ ಆಗಿದ್ದು, ಪೊಲೀಸರಿಂದ ಹುಡುಕಾಟ ನಡಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ಮೈಸೂರು ಜಿಲ್ಲೆ ಬೆಟ್ಟದಪುರದ ಬಾರಸೆ ಗ್ರಾಮದ ಸರಸ್ವತಿ (33) ನಾಪತ್ತೆಯಾದ ಮಹಿಳೆ. ಬೆಟ್ಟದಪುರ ಠಾಣೆಯಲ್ಲಿ ಸೆ.7 ರಂದು ಸರಸ್ವತಿ ನಾಪತ್ತೆ ಆಗಿರುವ ಪ್ರಕರಣ ದಾಖಲಾಗಿದ್ದು, ಇನ್ನೂ ಆಕೆ ಪತ್ತೆ ಆಗಿಲ್ಲ. ಮಡಿಕೇರಿಯ ಅಬ್ಬಿ ಫಾಲ್ಸ್​ ಬಳಿ ಮಹಿಳೆಯ ಚಪ್ಪಲಿ, ಬಟ್ಟೆ, ಪರ್ಸ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಅಬ್ಬಿ ಫಾಲ್ಸ್ ಪ್ರದೇಶದಲ್ಲಿ ಎನ್​ಡಿಆರ್​ಎಫ್​, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆಯವರೆಗೂ ಈಕೆ ಪತ್ತೆ ಆಗಿಲ್ಲ. ಇನ್ನೊಂದೆಡೆ ಈಕೆ ಮನೆಯಲ್ಲಿ ಬರೆದಿಟ್ಟು ಬಂದಿರುವ ಪತ್ರ ಸಿಕ್ಕಿದೆ. ಅದರಲ್ಲಿ ಈಕೆ ತಾನು ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

    ನನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ. ಮದ್ವೆಯಾಗಿ 12-13 ವರ್ಷದಿಂದ ಎಷ್ಟೇ ಕಷ್ಟ ಅಂದ್ರೂ ಸಹಿಸಿಕೊಂಡು ಬಂದೆ. ಆದ್ರೆ ನಮ್ಮನೇಲಿ ನನ್ನ ಇಷ್ಟ ಕಷ್ಟ ಏನೂ ನಡೀಲಿಲ್ಲ. ಹೊರಗಡೆ ಹೋಗಬೇಕು ಅಂದ್ರೆ ದುಡ್ಡು ಕೊಡ್ತಿರ್ಲಿಲ್ಲ. ನಾನೂ ಅದು ಬೇಕು ಇದು ಬೇಕು ಕೇಳ್ತಿರ್ಲಿಲ್ಲ. ಗಂಡ ಒಂದು ದಿನವೂ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ. ಬರೀ ದನ ಕರು ಇದ್ರಲ್ಲೇ ಕಾಲ ಕಳೆದ್ರು. ನಾನು ಕೆಲಸಕ್ಕೆ ಹೋಗ್ತೀನಿ ಅಂದ್ರೂ ಕಳಿಸ್ಲಿಲ್ಲ, ಯಾರನ್ನು ಮಾತಾಡಿಸಿದ್ರೂ ಗಂಡಂಗೆ ಅನುಮಾನ. ಇತ್ತೀಚೆಗೆ ನನಗೆ ಸಹಿಸಿಕೊಳ್ಳಲು ಆಗ್ತಿಲ್ಲ, ನಾನು ಎಲ್ಲೇ ಹೋದ್ರೂ, ಏನೇ ಮಾಡ್ಕೊಂಡು ಸತ್ರೂ ಯಾರೂ ಜವಾಬ್ದಾರರಲ್ಲ. ನನ್ನನ್ನು ಹುಡುಕಬೇಡಿ, ನನ್ನ ಮಕ್ಕಳನ್ನು ಚೆನ್ನಾಗಿ ನೋಡ್ಕೊಳಿ ಎಂದು ಆ ಪತ್ರದಲ್ಲಿ ಬರೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts