More

    ಹೊಸ ಧರ್ಮ ಉದಯಕ್ಕೆ ಕಾರಣರಾದ ಸಿದ್ಧಾರ್ಥ

    ಕನಕಗಿರಿ: ಶಾಂತಿ, ಅಹಿಂಸೆ, ಕರುಣೆ ಸಂದೇಶ ಸಾರುವ ಮೂಲಕ ಗೌತಮ ಬುದ್ಧ ಜಗತ್ತಿಗೆ ಬೆಳಕಾಗಿದ್ದಾರೆ ಎಂದು ಕಾಂಗ್ರೆಸ್‌ನ ಯುವ ಮುಖಂಡ ನೀಲಕಂಠ ಬಡಿಗೇರ ಹೇಳಿದರು.

    ಇಲ್ಲಿನ ಬುದ್ಧ ಸರ್ಕಲ್‌ನಲ್ಲಿ ಬುದ್ಧ ಪೂರ್ಣಿಮೆ ನಿಮಿತ್ತ ಬುದ್ಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ವಿಶ್ವವೇ ಬುದ್ಧ್ದನ ಶಾಂತಿ, ಅಹಿಂಸೆ, ಕರುಣೆ, ಸಮಾನತೆ ಅನುಸರಿಸುತ್ತಿದೆ. ಹೊರ ದೇಶಕ್ಕೆ ತೆರಳಿದ ಸಂದರ್ಭದಲ್ಲಿ ಈ ನಾಡಿನ ಗಣ್ಯಾತಿಗಣ್ಯರು ಹೇಳುವುದು ಜಗತ್ತಿಗೆ ಶಾಂತಿ ಸಂದೇಶ ಸಾರಿದ ಭೂಮಿ ನಮ್ಮದು ಎಂದು. ಮೌಢ್ಯ, ಕಂದಾಚಾರ, ವರ್ಣ ವ್ಯವಸ್ಥೆ ಧಿಕ್ಕರಿಸಿ ಸಿದ್ಧಾರ್ಥ ಹೊಸ ಧರ್ಮ ಉದಯಕ್ಕೆ ಕಾರಣರಾದರು.

    ಮನುಷ್ಯನನ್ನು ಕೊಂದು ಧರ್ಮ ರಕ್ಷಣೆ ಮಾಡುವುದಕ್ಕಿಂತ ಧರ್ಮವನ್ನೇ ಕೊಂದು ಮನುಷ್ಯನ ರಕ್ಷಣೆ ಮಾಡಿ. ಮನುಷ್ಯತ್ವವೇ ನಿಜವಾದ ಧರ್ಮ. ಈ ಸಂದೇಶವನ್ನು ನಾವೆಲ್ಲರೂ ಅರ್ಥೈಸಿಕೊಂಡು ಬದುಕಬೇಕಿದೆ. ಬುದ್ಧನ ಪಂಚಶೀಲ ತತ್ವಗಳು, ಉಪದೇಶ, ಬೋಧನೆಗಳನ್ನು ಪಾಲಿಸಿದ್ಧೇ ಆದಲ್ಲಿ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ ಎಂದರು.

    ಸಾಹಿತಿ ಅಲ್ಲಾಗಿರಿರಾಜ್ ಮಾತನಾಡಿ, ಬುದ್ಧ ಎನ್ನುವ ವಿರಾಗಿಯನ್ನು ಜಗತ್ತು ಸದಾ ನಮಿಸುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್ ಎಂಬ ತ್ರಿವಳಿ ರತ್ನಗಳ ಸಿದ್ಧಾಂತ ಎಂದಿಗೂ ಪ್ರಸ್ತುತ ಎಂದರು.

    ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ, ಅಸಮಾನತೆಯನ್ನು 2500 ವಷರ್ಗಳ ಹಿಂದೆಯೇ ಬುದ್ಧ ವಿರೋಧಿಸಿ ಜನಸಾಮಾನ್ಯರ ಧರ್ಮವನ್ನು ಸ್ಥಾಪಿಸಿದರು. ಅವರು ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದರು ಎಂದರು.

    ತಾಪಂ ಮಾಜಿ ಅಧ್ಯಕ್ಷ ಹೊನ್ನೂರಸಾಬ ಮೇಸ್ತ್ರಿ, ಪಪಂ ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಪಪಂ ಸದಸ್ಯರಾದ ಶೇಷಪ್ಪ ಪೂಜಾರ, ಕಂಠಿರಂಗಪ್ಪ ನಾಯಕ, ಪ್ರಮುಖರಾದ ಮದರಸಾಬ್, ಅನ್ನು ಚಳ್ಳಮರದ, ಸಣ್ಣ ಕನಕಪ್ಪ, ದಲಿತ ಮುಖಂಡ ಪಾಮಣ್ಣ ಅರಳಿಗನೂರ, ಸಣ್ಣ ಹನುಮಂತ ಹುಲಿಹೈದರ, ನಿಂಗಪ್ಪ ಪೂಜಾರ, ಕನಕಪ್ಪ ಮ್ಯಾಗಡೆ, ವೆಂಕಟೇಶ್ ನಿರ್ಲೂಟಿ, ರಾಮಕೃಷ್ಣ ನಾಯಕ, ಬಾರಿಮರದಪ್ಪ ನಡಲಮನಿ, ಚಂದ್ರಗೌಡ, ಹನುಮಂತ ಬಂಕಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts