ಮೋದಿ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಆಡಳಿತ

1 Min Read
MODI
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನವಲಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಸಿ ನೆಟ್ಟರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಯ್ಯಸ್ವಾಮಿ ನವಲಿ, ಪ್ರಮುಖರಾದ ನಿಂಗಪ್ಪ ನಾಯಕ ಇತರರಿದ್ದರು.

ಕನಕಗಿರಿ: ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ನವಲಿ ಗ್ರಾಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರು ಗಿಡ ನೆಡುವ ಮೂಲಕ ಭಾನುವಾರ ವಿಜಯೋತ್ಸವ ಆಚರಿಸಿದರು.

ಜಡೇ ಸಿದ್ದೇಶ್ವರ ಶಿವಯೋಗಿಗಳ ಮೂಲ ಗದ್ದುಗೆಯ ಮುಂಭಾಗದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ನರೇಂದ್ರ ಮೋದಿಯವರ ಭಾವಚಿತ್ರದ ಫ್ಲೆಕ್ಸ್ ಹಿಡಿದು ಗಿಡಗಳನ್ನು ನೆಟ್ಟು ಮೋದಿಗೆ ಜೈಕಾರ ಹಾಕಿದರು.

ಪ್ರಾಕೃಪಸ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ ಮಾತನಾಡಿ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜವಾಹರಲಾಲ್ ನೆಹರೂ ಬಳಿಕ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದು ಇತಿಹಾಸ. ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಇಡೀ ಪ್ರಪಂಚವೇ ನಮ್ಮ ದೇಶದ ಕಡೆಗೆ ಹಿಂದುರುಗಿ ನೋಡುವಂತೆ ಕೆಲಸ ಮಾಡಿದ್ದಾರೆ. ಇದೀಗ ಮತ್ತೇ ಮಿತ್ರ ಪಕ್ಷಗಳೊಟ್ಟಿಗೆ ಪ್ರಧಾನಿ ಹುದ್ದೆಗೆ ಏರುತ್ತಿರುವುದು ಸಂತಸದ ಕ್ಷಣವಾಗಿದೆ. ಇದನ್ನು ಸ್ಮರಣೀಯವಾಗಿಸಲು ಗಿಡಗಳನ್ನು ನೆಡಲಾಗುತ್ತಿದೆ ಎಂದರು.

ಸಂಜೆ ಗ್ರಾಮದ ಮಾಕಣ್ಣ ಕಂಬಳಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಪ್ರಾಕೃಪಸ ಸಂಘದ ನಿರ್ದೇಶಕ ಖಾಜಾಸಾಬ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಯ್ಯಸ್ವಾಮಿ ನವಲಿ, ಪ್ರಮುಖರಾದ ನಿಂಗಪ್ಪ ನಾಯಕ, ಸಂಗಮೇಶ ಅಂಗಡಿ, ಜಡಿಯಪ್ಪ ಉಪ್ಪಳ ಇತರರಿದ್ದರು.

See also  ಪ್ರಧಾನಿ ಮೋದಿಯವರ ಹತ್ತಿರದ ಸಂಬಂಧಿ ಕೋವಿಡ್‌ಗೆ ಬಲಿ; ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಕೊನೆಯುಸಿರು..
Share This Article