

ಮೇಷ: ಕೌಟುಂಬಿಕ ಕಲಹ ನಡೆಯುವ ಸಂಭವ. ಸಭೆ- ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿ ಇರಲಿದೆ. ಆಪ್ತರೊಂದಿಗೆ ಸಮಾಲೋಚನೆ. ಶುಭಸಂಖ್ಯೆ: 9
ವೃಷಭ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಇಲ್ಲದಿರುವುದು ಓದಿಗೆ ಅಡಚಣೆ ಉಂಟುಮಾಡುವುದು. ದೇವತಾದರ್ಶನ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ ಕಂಡು ಬಂದು ಮಾನಸಿಕ ನೆಮ್ಮದಿ. ದುಂದು ವೆಚ್ಚ ಆಗುವುದನ್ನು ನಿಯಂತ್ರಿಸಿ. ಸ್ಥಿರಾಸ್ತಿ ನಷ್ಟ. ಶುಭಸಂಖ್ಯೆ: 1
ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ ಕಟ್ಟಿಕೊಳ್ಳಬೇಡಿ. ಕೈಗಾರಿಕಾ ರಂಗದವರಿಗೆ ಶುಭದಾಯಕ ದಿನ. ಮಾನಸಿಕ ಅಶಾಂತಿ. ಶುಭಸಂಖ್ಯೆ: 7
ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆತು ಸಂತಸ. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರಿಗೆ ಗೌರವ ಪ್ರಾಪ್ತಿ. ಆರ್ಥಿಕ ಹಿನ್ನಡೆ. ಶುಭಸಂಖ್ಯೆ: 3
ಕನ್ಯಾ: ಮನೋ ವೈರಾಗ್ಯ. ವ್ಯಾಪಾರದಲ್ಲಿ ಮೋಸವಾಗಬಹುದು, ತೀರ ಎಚ್ಚರದಿಂದ ಇರಿ. ಬಂಧುಮಿತ್ರರ ಆಗಮನದಿಂದ ಖುಷಿ. ಶುಭಸಂಖ್ಯೆ: 7
ತುಲಾ: ಅತಿಯಾದ ಕೆಲಸ ದೇಹಾಲಸ್ಯಕ್ಕೆ ಕಾರಣವಾದೀತು. ಭೂ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗಲಿದೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7
ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆಯಾಗಿ ಮನಸಿಗೆ ನಿರಾಳ ಭಾವ. ಹಣದ ಒಳಹರಿವು ಹೆಚ್ಚಲಿದೆ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8
ಧನುಸ್ಸು: ವಿದ್ಯಾರ್ಜನೆಗಾಗಿ ಪ್ರಯಾಣ ಮಾಡಲೇಬೇಕಾಗುವುದು. ವೈದ್ಯರಿಗೆ ಶುಭಕಾರಕ ಕ್ಷಣಗಳು. ಮಕ್ಕಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 2
ಮಕರ: ಸಾಲ ಮರುಪಾವತಿ ಮಾಡುವಿರಿ. ಶ್ರಮಕ್ಕೆ ತಕ್ಕ ಲಾಭ ದೊರೆತು ಸಮಾಧಾನ. ಹಿರಿಯರೊಂದಿಗೆ ಅನವಶ್ಯಕ ಜಗಳ ಮಾಡಬೇಡಿ. ಶುಭಸಂಖ್ಯೆ: 5
ಕುಂಭ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬರಲಿದೆ. ಉದ್ಯೋಗದಲ್ಲಿ ಪ್ರಗತಿಯಾಗುವುದು. ಆರ್ಥಿಕ ಅನುಕೂಲ ಒದಗುತ್ತದೆ. ಶುಭಸಂಖ್ಯೆ: 9
ಮೀನ: ಮಕ್ಕಳಿಂದ ಧನಾಗಮನ. ಮಾತಿನಿಂದ ಸಮಸ್ಯೆಯಾದೀತು, ಆಡುವ ಮುನ್ನ ಯೋಚಿಸಿ. ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ಶುಭಸಂಖ್ಯೆ: 1