ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!

Lick
Published on

ಲಂಡನ್​: ಮಹಾಮಾರಿ ಕರೊನಾ ವೈರಸ್​ ಅಸ್ತಿತ್ವವನ್ನು ನಿರಾಕರಿಸಿರುವ ಯುನೈಟೆಡ್​ ಕಿಂಗ್​ಡಮ್ ಮೂಲದ ವ್ಯಕ್ತಿ, ಫೇಸ್​ಬುಕ್​ ಲೈವ್​ನಲ್ಲಿ ಎಟಿಎಂ ಕೀಪ್ಯಾಡ್​ ಅನ್ನು ನಾಲಿಗೆಯಿಂದ ನೆಕ್ಕುವ ಮೂಲಕ ಕೋವಿಡ್​ ಇಲ್ಲವೇ ಇಲ್ಲ ಎಂದು ಹೇಳುವ ಪ್ರಯತ್ನಕ್ಕೆ ಕೈಹಾಕಿ ಎಲ್ಲರ ಹುಬ್ಬೇರಿಸಿದ್ದಾನೆ.

ಯುಕೆಯ ಡರ್ನಾಲ್​ನಲ್ಲಿ ಈ ಘಟನೆ ನಡೆದಿದೆ. ಕರೊನಾ ವೈರಸ್​ ನನ್ನ _ ಎಂದು ಕೆಟ್ಟ ಪದ ಪ್ರಯೋಗ ಮಾಡಿದ ಬಳಿಕ ಆತ ಎಟಿಎಂ ಕೀಪ್ಯಾಡ್​ ಅನ್ನು ನಾಲಿಗೆಯಿಂದ ನೆಕ್ಕಿದ್ದಾನೆ. ತನ್ನ ವರ್ತನೆಯನ್ನು ಫೇಸ್​ಬುಕ್​ ಲೈವ್​ ಸಹ ಮಾಡಿದ್ದು, ಅಪರಿಚಿತ ವ್ಯಕ್ತಿಯ ವರ್ತನೆಯಿಂದ ಬೇಸತ್ತ ಪ್ರತ್ಯಕ್ಷದರ್ಶಿ ಒಬ್ಬರು ವಿಡಿಯೋವನ್ನು ಸೌಥ್​ ಯಾರ್ಕ್​ಶೈರ್​ ಪೊಲೀಸರಿಗೆ ವರದಿ ಮಾಡಿದ್ದಾರೆ.

ಆತ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಆಗಾಗ ಈತ ತನ್ನ ಸ್ಟಂಟ್​ಗಳನ್ನು​ ಪ್ರದರ್ಶಿಸುತ್ತಾನೆ. ಇದು ಡರ್ನಾಲ್​ನಲ್ಲಿ ನಡೆದ ಘಟನೆಯಾಗಿದ್ದು, ಎರಡನೇ ಬಾರಿ ಎಟಿಎಂ ಯಂತ್ರದ ಕೀಪ್ಯಾಡ್​ ಅನ್ನು ನೆಕ್ಕಿದ್ದಾನೆಂದು ಪ್ರತ್ಯಕ್ಷದರ್ಶಿ ಮಹಿಳೆ ಆರೋಪಿಸಿದ್ದಾರೆ.

ತನ್ನಷ್ಟಕ್ಕೆ ತಾನೇ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಅದನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾನೆ. ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು ತೆಗೆದಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಯಾರ್ಕ್​ಶೈರ್​ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಇನ್ನು ಯುಕೆಯಲ್ಲಿ ರೂಪಾಂತರ ಕರೊನಾ ವೈರಸ್​ ಭೀತಿ ಹೆಚ್ಚಾಗಿದ್ದು, ಮತ್ತೆ ಕಠಿಣ ಲಾಕ್​ಡೌನ್​ ನಿಯಮ ಜಾರಿಯಲ್ಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ ನೀಡಲಾಗಿದೆ. ಆದರೆ, ಅಪರಿಚಿತ ವ್ಯಕ್ತಿಯೊಬ್ಬನ ವರ್ತನೆಯಿಂದ ಭೀತಿ ಮತ್ತಷ್ಟು ಹೆಚ್ಚಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net