More

    VIDEO| ನನ್ನ ಪತ್ನಿ ಇಲ್ಲಿಗೆ ಬರಬೇಕು, ಇಲ್ಲವಾದಲ್ಲಿ ಈಗಲೇ ಸಾಯುವೆ… ಎಂದು ಅಪಾಯಕಾರಿ ಸ್ಥಳಕ್ಕೆ ಹೋಗೇಬಿಟ್ಟ! ಮುಂದೇನಾಯ್ತು?

    ಮೈಸೂರು: ಹೆಂಡತಿ ಮುನಿಸಿಕೊಂಡು ಮನೆಬಿಟ್ಟು ಹೋಗಿದ್ದಕ್ಕೆ ಬೇಸರಗೊಂಡ ಪತಿರಾಯ ಮಾಡಿದ ಕಿತಾಪತಿಗೆ ಸ್ಥಳೀಯರೂ ಕೆಲಕಾಲ ಆತಂಕಗೊಂಡಿದ್ದ ಘಟನೆ ವಿದ್ಯಾರಣ್ಯಪುರಂನಲ್ಲಿ ಮಂಗಳವಾರ ಸಂಭವಿಸಿದೆ.

    ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್ ಮತ್ತು ಈತನ ಪತ್ನಿ ನಡುವೆ ಇತ್ತೀಚಿಗೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಮುನಿಸಿಕೊಂಡ ಪತ್ನಿ, ಗಂಡ ಬೇಡವೆಂದು ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕಂಗಾಲಾದ ಗೌರಿಶಂಕರ್​, ಆತ್ಮಹತ್ಯೆ ಮಾಡಿಕೊಳ್ಳಲು ಬಿಎಸ್ಎನ್ಎಲ್​ ಟವರ್​ ಏರಿದ. ಇದನ್ನು ಗಮನಿಸಿದ ಸ್ಥಳೀಯರು, ಈ ನಿರ್ಧಾರ ಬೇಡ, ಕೆಳಗೆ ಇಳಿ ಎಂದು ಕೆಳಗಿಳಿಯುವಂತೆ ಮನವೊಲಿಸಿದರೂ ಆತ ಕೇಳಲಿಲ್ಲ. ಇದನ್ನೂ ಓದಿರಿ ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ನನ್ನ ಹೆಂಡತಿಯನ್ನು ವಾಪಸ್ ಕರೆಸಿ, ಇಲ್ಲವಾದರೆ ಬಿಎಸ್ಎನ್ಎಲ್​ ಟವರ್​ನಿಂದ ಕೆಳಗೆ ಬಿದ್ದು ಸಾಯುತ್ತೇನೆ ಎಂದು ಗೌರಿಶಂಕರ್​ ಪಟ್ಟು ಹಿಡಿದಿದ್ದ. ಅವಳು ಬರ್ತಿದ್ದಾಳೆ ಕೆಳಗೆ ಇಳಿ ಎಂದು ಸಾರ್ವಜನಿಕರು ಹೇಳಿದರೂ ಆತ ಮಾತ್ರ ಜಗ್ಗಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಕೆಳಗೆ ಬಾ. ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರೂ ಆತ ಒಪ್ಪಲಿಲ್ಲ.

    ಸುಮಾರು ಒಂದೂವರೆ ಗಂಟೆ ಕಾಲ ಹರಸಾಹಸಪಟ್ಟ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ಕೊನೆಗೂ ಗೌರಿಶಂಕರ್​ನನ್ನು ಕೆಳಗಿಸುವಲ್ಲಿ ಯಶಸ್ವಿಯಾದರು. ಗೌರಿಶಂಕರ್ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಾಗಿದೆ.

    ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

    ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts