

ಬೆಂಗಳೂರು: ಪದೇಪದೆ ಆತ್ಮಹತ್ಯೆಯ ಮಾತುಗಳನ್ನಾಡುತ್ತಿದ್ದ ಉಪ್ಪು ಹುಳಿ ಖಾರ, ಶಿರಾಡಿ ಘಾಟ್ ಸಿನಿಮಾ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಕೊನೆಗೂ ಸಾವಿನ ಮನೆಯ ಕದ ತಟ್ಟಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಕಳೆದ 7 ತಿಂಗಳಲ್ಲಿ ಹಲವು ಬಾರಿ ಬದುಕಿನ ಪಯಣ ಮುಗಿಸಿಕೊಳ್ಳಲು ಯತ್ನಿಸಿದ್ದರು. ಬದುಕಿನ ಜಂಜಾಟದಲ್ಲಿ ಸಾವಿಗಾಗಿ ಹಾತೊರೆದಿದ್ದರು ಎಂಬುದಕ್ಕೆ ಇಲ್ಲಿನ ಕೆಲ ಘಟನೆಗಳೇ ಸಾಕ್ಷಿ.
ಮಾಗಡಿ ಮುಖ್ಯರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನ್ಗೆ ನೇಣುಹಾಕಿಕೊಂಡು ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹಲವು ಬಾರಿ ಹೇಳಿಕೊಂಡಿದ್ದ ಜಯಶ್ರೀ, ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೂ ಮನವಿ ಸಲ್ಲಿಸಿದ್ದರು. ಇದನ್ನೂ ಓದಿರಿ ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
'ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ಸುದೀಪ್ ಸರ್ ಹತ್ರನೂ ನಾನು ಆರ್ಥಿಕ ಸಹಾಯವನ್ನು ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ತುಂಬಾ ನೋವಿನಲ್ಲಿದ್ದೇನೆ. ನನಗೆ ದಯಾಮರಣವನ್ನು ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ' ಎಂದು ಕಣ್ಣೀರು ಹಾಕಿದ್ದರು. ಇದಾದ ಬೆನ್ನಲ್ಲೇ ನೆಟ್ಟಿಗರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಧೈರ್ಯವಾಗಿರಿ ಎಂದಿದ್ದರು. ಅಲ್ಲದೆ, ಅವರನ್ನು ಸಂಪರ್ಕಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದರು. ಇದನ್ನೂ ಓದಿರಿ ಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ
ಇದಕ್ಕೂ ಮುನ್ನ ಅಂದ್ರೆ 2019ರ ಸೆಪ್ಟೆಂಬರ್ನಲ್ಲಿ ತನ್ನ ಸೋದರ ಮಾವನ ವಿರುದ್ಧ ಜಯಶ್ರೀ ಆರೋಪಗಳ ಸುರಿಮಳೆಗೈದಿದ್ದರು. 'ಮೊದಲಿನಿಂದಲೂ ನನಗೆ ನಮ್ಮ ಮಾವ ಕಿರುಕುಳ ಕೊಡುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಮ್ಮ ಮಾವ ಒಬ್ಬ ಸೈಕೋ. ಆಸ್ತಿ ವಿಚಾರಕ್ಕೆ ನಮ್ಮನ್ನು ಮನೆಯಿಂದ ಮಾವ ಹೊರಹಾಕಿದ್ದಾರೆ' ಎಂದು ಮಾವ ಗಿರೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಷ್ಟೆಲ್ಲ ಬೆಳವಣಿಗೆ ಬಳಿಕ ನಟಿ ಜಯಶ್ರೀ ಬದುಕಲ್ಲಿ ಹೊಸ ಭರವಸೆ ಮೂಡಿದೆ, ಆಕೆ ಇನ್ಮುಂದೆ ಆರಾಮವಾಗಿ ಇರಲಿದ್ದಾಳೆ ಎಂದೇ ಭಾವಿಸಲಾಗಿತ್ತು. ಆದರಿಂದ ಜಯಶ್ರೀ ಬಾರದಲೋಕಕ್ಕೆ ಹೋಗಿರುವುದು ದುರಂತ.