More

    ಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ

    ಬೆಂಗಳೂರು: ಖಾತೆ ಅದಲು-ಬದಲಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ವಿರುದ್ಧ ಗರಂ ಆಗಿರುವ ಸಚಿವ ಮಾಧುಸ್ವಾಮಿ, ನಾಳೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

    ನಾಳೆ(ಜ.26) ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಸ್ಥಾನಕ್ಕೆ ನಾನು ರಾಜಿನಾಮೆ ನೀಡುವೆ. ಅದನ್ನು ಅಂಗೀಕರಿಸಿ ಸರ್ ಎಂದು ಮುಖ್ಯಮಂತ್ರಿಗೆ ಮಾಧುಸ್ವಾಮಿ ಹೇಳಿದ್ದಾರೆ. ದೂರವಾಣಿ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರಾದರೂ ಮಾಧುಸ್ವಾಮಿಯ ಅಸಮಾಧಾನ ತಣಿದಿಲ್ಲ. ಇದನ್ನೂ ಓದಿರಿ ಶಿವಮೊಗ್ಗದಲ್ಲಿ ಕ್ರಷರ್​ ಸ್ಫೋಟ: ಇಲ್ಲಿನ ಕಲ್ಲುಕ್ವಾರಿಗೆ ಬಂದಿದ್ದ ಉಗ್ರ ಯಾಸಿನ್ ಭಟ್ಕಳ್!

    ಡಾ.ಕೆ.ಸುಧಾಕರ್​ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ಕೊಟ್ಟಿದ್ದ ಸಿಎಂ, ಇದೀಗ ಮತ್ತೆ ಆ ಖಾತೆಯನ್ನು ಸುಧಾಕರ್​ಗೆ ಕೊಡಲು ನಿರ್ಧರಿಸಿದ್ದಾರೆ. ಮಾಧುಸ್ವಾಮಿಗೆ ಇಂದು ಸಂಜೆಯೊಳಗೆ ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಲು ಸಿಎಂ ಸಜ್ಜಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಸೋಮವಾರ ತುಮಕೂರು ಜಿಲ್ಲೆಯ ಹುಳಿಯಾರು ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾಧುಸ್ವಾಮಿ ಪಾಲ್ಗೊಂಡಿದ್ದರು. ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ ಆಗಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಸಚಿವವರು, ಅಲ್ಲಿಂದ ದಿಢೀರ್ ವಾಪಸ್ ಬಂದರು. ವಕ್ಫ್​ ಖಾತೆಯನ್ನು ಕಿತ್ತುಕೊಳ್ಳಿ, ರಾಜೀನಾಮೆ ಕೊಟ್ಟು ಸರ್ಕಾರದ ಅಕ್ರಮಗಳ ದಾಖಲೆ ಬಿಡುಗಡೆಗೊಳಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

    ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಖಾತೆಯನ್ನು ನನಗೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಸಿಎಂ ಕಚೇರಿಯಿಂದ ಬಂದಿದೆ. ಆ ಖಾತೆ ಕೊಟ್ಟಿದ್ದರೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂಗೆ ಒತ್ತಡ ಇರುವುದು ಸಹಜ. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಅಧಿಕಾರ ಹಂಚಿಕೆಯಾದರೆ ಕಷ್ಟ. ನಮ್ಮ ಮುಂದಿರುವ ಸವಾಲು ಕರೊನಾ ಲಸಿಕೆ ಕೊಡೋದು. ಯಾವುದೇ ಸರ್ಕಾರ ಬಂದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣವನ್ನ ಒಟ್ಟಿಗೆ ಕೊಡಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

    ಸಾರಿಗೆ ಬಸ್​-ಕಾರಿನ ನಡುವೆ ಭೀಕರ ಅಫಾಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ

    ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!

    100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

    ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts