More

    ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ನೀವಿದನ್ನು ಗಮನಿಸಿದ್ರಾ? ಲೈವ್​ನಲ್ಲೂ ಈ ದೃಶ್ಯವನ್ನು ತೋರಿಸಿಲ್ಲ!

    ನ್ಯೂಯಾರ್ಕ್​: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮೂರನೇ ಗೆಲುವನ್ನು ದಾಖಲಿಸಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಜೂನ್​ 12) ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಅಮೆರಿಕ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ. ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಬೌಲಿಂಗ್‌ ದಾಳಿಗೆ ನಲುಗಿದ ಯುಎಸ್‌ಎ ಕೇವಲ 110 ರನ್‌ಗಳಿಗೆ ಸೀಮಿತವಾಯಿತು. ಆ ಬಳಿಕ ಕೊಹ್ಲಿ, ರೋಹಿತ್ ಶರ್ಮರಂತಹ ಸ್ಟಾರ್​ ಬ್ಯಾಟ್ಸ್​ಮನ್​ಗಳು ತಕ್ಷಣವೇ ಔಟಾಗಿ ಸ್ವಲ್ಪ ಗೊಂದಲ ಉಂಟು ಮಾಡಿದರಾದರೂ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಸ್ಥಿರ ಆಟವಾಡಿ ಪಂದ್ಯವನ್ನು ಗೆಲ್ಲಿಸಿದರು. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಗೋಲ್ಡನ್ ಡಕ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಒಡೆಯಿತು.

    ವಿರಾಟ್ ಕೊಹ್ಲಿ ಔಟಾದ ನಂತರ ಪೆವಿಲಿಯನ್‌ಗೆ ಹೋಗುವಾಗ ಮಾಡಿದ ಒಂದು ಕೆಲಸವನ್ನು ನಿನ್ನೆಯ ಮ್ಯಾಚ್‌ನಲ್ಲಿ ಲೈವ್‌ನಲ್ಲಿಯೂ ತೋರಿಸಲಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಮೊಬೈಲ್​ ರೆಕಾರ್ಡಿಂಗ್​ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಗಾದರೆ, ಔಟಾದ ಕೊಹ್ಲಿ ಮಾಡಿದ್ದೇನು? ಅಮೆರಿಕದ ಬೌಲರ್ ಸೌರಭ್ ನೇತ್ರವಾಲ್ಕರ್ ಅವರು ಎಸೆದ ಎರಡನೇ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಕೊಹ್ಲಿ ಔಟಾದರು.

    ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾಗೂ ನಾನ್ ಸ್ಟ್ರೈಕರ್ ಎಂಡ್​ನಲ್ಲಿದ್ದ ರೋಹಿತ್ ಶರ್ಮ ಕೂಡ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದನ್ನು ನೋಡಿ ಶಾಕ್​ ಆದರು. ಅಲ್ಲದೆ, ಸ್ವತಃ ಕೊಹ್ಲಿಗೂ ಅದು ಶಾಕ್​ ಆಗಿತ್ತು. ಹೀಗಾಗಿ ಔಟಾದ ಬಳಿಕ ಪಿಚ್ ನೋಡುತ್ತಲೇ ಹೆಜ್ಜೆ ಹಾಕಿದರು. ಈ ದೃಶ್ಯವನ್ನು ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಯನ್ನು ಈ ರೀತಿ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಅಮೆರಿಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಆರಂಭಿಕರಾದ ಸ್ಟೀವನ್ ಟೇಲರ್ 24 ಮತ್ತು ಎನ್.ಆರ್.ಕುಮಾರ್ 27 ರನ್ ಗಳಿಸಿದರು. ಭಾರತದ ಬೌಲರ್‌ಗಳ ಪೈಕಿ ಅರ್ಷದೀಪ್ ಸಿಂಗ್ 4 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 2 ಹಾಗೂ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು. 111 ರನ್‌ಗಳ ಅಲ್ಪ ಗುರಿಯನ್ನು ಟೀಂ ಇಂಡಿಯಾ 18.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ತಲುಪಿತು.

    See also  ಕೋಲಾಜ್ ಚಿತ್ರದ ಮೂಲಕ ಎಚ್‌ಐವಿ ಜಾಗೃತಿ

    ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ತಂದರು. ಕೊಹ್ಲಿ 0, ರೋಹಿತ್ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಪಂತ್ 18, ಸೂರ್ಯ 50, ದುಬೆ 31 ರನ್ ಗಳಿಸಿದರು. ಅಮೆರಿಕ ಬೌಲರ್‌ಗಳ ಪೈಕಿ ನೇತ್ರವಾಲ್ಕರ್ 2 ವಿಕೆಟ್ ಪಡೆದು ಮಿಂಚಿದರು. (ಏಜೆನ್ಸೀಸ್​)

    ಅಮೆರಿಕ ವಿರುದ್ಧ ವಿರಾಟ್​ ಕೊಹ್ಲಿ ಗೋಲ್ಡನ್​ ಡಕ್​: ರೋಹಿತ್​ ಶರ್ಮ ಕೊಟ್ಟ ಪ್ರತಿಕ್ರಿಯೆ ವೈರಲ್​!

    ಶಾಕ್​ ಆಗಿ ಕ್ರೀಸ್​ ಮೇಲೆ ಕುಳಿತುಬಿಟ್ಟ ಸೂರ್ಯಕುಮಾರ್​ ಯಾದವ್​! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts