ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

nurder
Published on

ಮದನಪಲ್ಲಿ: ಆಂಧ್ರದಲ್ಲಿ ತಂದೆ ತಾಯಿಯೇ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆಯಲ್ಲಿ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ನಾವು ಇಬ್ಬರೂ ಮಕ್ಕಳನ್ನು ಕೊಲೆ ಮಾಡಲಿಲ್ಲ, ಒಬ್ಬಳನ್ನೇ ಮಾಡಿದ್ದು ಎಂದು ಮೃತರ ತಾಯಿ ಹೇಳಿದ್ದಾರೆ. ಕಿರಿಯ ಮಗಳನ್ನು ಹಿರಿಯ ಮಗಳೇ ಕೊಲೆ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ.

ನಾವು ಕೊಲೆ ಮಾಡಿಲ್ಲ. ನಮ್ಮ ಹಿರಿ ಮಗಳು ಅಲೈಖ್ಯಾ (27) ಸಾಯಿದಿವ್ಯಾಳನ್ನು (22) ಕೊಲೆ ಮಾಡಿದಳು. ಆಮೇಲೆ ನಮ್ಮ ಬಳಿ ಬಂದು ಬೇಡಿಕೊಂಡಳು. ನನ್ನನ್ನೂ ಕೊಲೆ ಮಾಡಿ, ನಾನು ಹೋಗಿ ದಿವ್ಯಾಳನ್ನು ವಾಪಾಸು ಕರೆದು ತರುತ್ತೇನೆ ಎಂದಳು. ಅದಕ್ಕಾಗಿ ನಾವು ಅವಳನ್ನು ಕೊಂದೆವು ಎಂದು ಮೃತರ ತಾಯಿ ಪದ್ಮಜಾ ಹೇಳಿದ್ದಾಳೆ. ಸದ್ಯ ಪೊಲೀಸ್​ ಠಾಣೆಯಲ್ಲಿರುವ ಆಕೆ ಪೊಲೀಸರು ಎದುರು ಈ ಹೇಳಿಕೆ ಕೊಟ್ಟಿದ್ದಾಳೆ.

ಭಾನುವಾರ ಸಂಜೆ ಮೃತರ ತಂದೆಯ ಸಹೋದ್ಯೋಗಿಯಿಂದ ಘಟನೆಯ ವಿವರ ಪೊಲೀಸರಿಗೆ ಸಿಕ್ಕಿದ್ದು, ಅವರು ಆ ಮನೆಗೆ ತೆರಳಿದ್ದಾರೆ. ಆ ಸಮಯದಲ್ಲಿ ಇಬ್ಬರು ಹೆಣ್ಣ ಮಕ್ಕಳ ಮೃತ ದೇಹವನ್ನು ರೂಮಿನಲ್ಲಿ ಇಡಲಾಗಿತ್ತು. ಇಬ್ಬರ ದೇಹದ ಮೇಲೂ ಒಂದೂ ಬಟ್ಟೆಯಿರಲಿಲ್ಲ. ಪೊಲೀಸರು ಮನೆಗೆ ಬೂಟು ಕಾಲಿನಲ್ಲಿ ಬಂದು ಮನೆಯೊಳಗೆಲ್ಲ ಬೂಟ ಕಾಲಿನಲ್ಲೇ ಓಡಾಡಿದ್ದಾರೆ. ಆಗ ಅವರ ತಾಯಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲ ಕಡೆಯೂ ದೇವರಿದ್ದಾರೆ, ನೀವೇಕೆ ಬೂಟು ಕಾಲಿನಲ್ಲಿ ಓಡಾಡುತ್ತಿದ್ದೀರಿ ಎಂದು ಕೇಳಿದ್ದಾರೆ.

ಮೃತ ದೇಹಗಳಿದ್ದ ರೂಮಿಗೆ ಪೊಲೀಸರು ಹೋಗದಂತೆ ತಡೆಯಲಾಗಿದೆ. ನನ್ನ ಮಕ್ಕಳು ಬಟ್ಟೆಯಿಲ್ಲದೆ ಇದ್ದಾರೆ, ನೀವು ಅಲ್ಲಿಗೆ ಹೋಗುವಂತಿಲ್ಲ ಎಂದು ಹೇಳಲಾಗಿದೆ. ನಂತರ ಪೊಲೀಸರು ನಾವು ನಿಮ್ಮ ಮಕ್ಕಳಿಗೆ ನಮಸ್ಕಾರ ಮಾಡಿ ಬರುತ್ತೇವೆ ಎಂದು ಹೇಳಿ ರೂಂ ಒಳಗೆ ಹೋಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲೂ ದಂಪತಿ ಬಿಟ್ಟಿಲ್ಲ. ಈಗ ಬೇಡ ಸೋಮವಾರ ಬಂದು ಅವರನ್ನು ಕರೆದುಕೊಂಡು ಹೋಗಿ. ನಮ್ಮ ಮಕ್ಕಳು ನಾಳೆ ಬೆಳಗ್ಗೆ ಬದುಕಿ ಬರುತ್ತಾರೆ ಎಂದು ಅವರು ವಾದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಂದೆಗೆ ಮಾತ್ರವೇ ಮಕ್ಕಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಇಬ್ಬರೂ ವಿಚಾರಣೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೂ ಪುರ್ನಜನ್ಮದ ಬಗ್ಗೆ ಅತೀವ ನಂಬಿಕೆ ಹುಟ್ಟಿಸಿದ್ದರು. ಅದೇ ನಂಬಿಕೆಯ ಮೇಲೆಯೇ ಅವರನ್ನು ಕೊಲೆ ಮಾಡಲಾಗಿದ್ದಾಗಿ ತಿಳಿಸಲಾಗಿದೆ.

ಸ್ನಾತಕೋತ್ತರ ಪದವಿ ಮುಗಿಸಿದ್ದ ಅಲೈಖ್ಯಾ, ಸಿವಿಲ್ಓ​ ಸರ್ವಿಸ್​ ಎಕ್ಸಾಂಗೆ ಸಿದ್ಧತೆ ನಡೆಸುತ್ತಿದ್ದಳು. ಎಂಬಿಎ ಪದವೀಧರೆ ಸಾಯಿದಿವ್ಯಾ ಸಂಗೀತ ಕ್ಲಾಸ್ ನಡೆಸುತ್ತಿದ್ದಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net