ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ಅನ್ಯ ಧ್ವಜಾರೋಹಣ

red fort protest 1
Published on

ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರಶಃ ರಣರಂಗವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ರೈತ ಮುಖಂಡರು ಸರ್ಕಾರದ ಮಾರ್ಗ ಸೂಚಿಯನ್ನ ಬ್ರೇಕ್​ ಮಾಡಿದ್ದಾರೆ. ಪೊಲೀಸ್​ ಸರ್ಪಗಾವಲನ್ನೇ ದಾಟಿಕೊಂಡು ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು, ಧ್ವಜಸ್ತಂಭವೇರಿ ಕಿಸಾನ್​ ಯೂನಿಯನ್​ ಧ್ವಜ ಹಾರಿಸಿದ್ದಾರೆ.

ಕೆಂಪುಕೋಟೆ ಮೇಲೆ ಜಮಾವಣೆಗೊಂಡ ರೈತರ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕೆಂಪುಕೋಟೆಗೆ ಮುತ್ತಿಗೆ ಹಾಕಲಾಗಿದ್ದು, ಗಣರಾಜ್ಯೋತ್ಸವ ದಿನದಂದೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ಇದನ್ನೂ ಓದಿರಿ VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

ಪ್ರಾರಂಭದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ಸರ್ಕಾರದ ಗೈಡ್​ಲೈನ್ಸ್​ ಅನ್ನೇ ಉಲ್ಲಂಘಿಸಿ, ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಕ್ಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, 11 ಸುತ್ತಿನ ಮಾತುಕತೆ ನಡೆಸಿದರೂ ಕೇಂದ್ರ ಸರ್ಕಾರದಿಂದ ರೈತರ ಬೇಡಿಕೆ ಈಡೇರಿಲ್ಲ. ಇನ್ನೆಷ್ಟು ದಿನ ರೈತರು ಕಾಯಬೇಕು? ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net