More

  ಹೆದ್ದಾರಿಯಲ್ಲಿನ ಹಂಪ್ಸ್ ತೆರವುಗೊಳಿಸಲು ರೈತರ ಆಗ್ರಹ

  ರಾಣೆಬೆನ್ನೂರ: ತಾಲೂಕಿನ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಹಾಕಿರುವ ರೋಡ್ ಹಂಪ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಭಾನುವಾರ ತಾಲೂಕಿನ ಹೆಡಿಯಾಲ ಗ್ರಾಮದ ಬಳಿಯಿರುವ ರಾಜ್ಯ ಹೆದ್ದಾರಿ ಟೋಲ್ ನಾಕಾ ಎದುರು ಪ್ರತಿಭಟನೆ ನಡೆಸಿದರು.
  ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಹೆದ್ದಾರಿಗಳಲ್ಲಿ ಹಂಪ್ಸ್ ಅಳವಡಿಸಬಾರದೆಂದು ನ್ಯಾಯಾಲಯದ ಆದೇಶವಿದ್ದರೂ ರಾಜ್ಯ ಹೆದ್ದಾರಿಯಲ್ಲಿ ಅನವಶ್ಯಕವಾಗಿ ಅಲ್ಲೆಂದರಲ್ಲಿ ಹಂಪ್ಸ್ ಹಾಕಲಾಗಿದೆ. ಇವುಗಳಿಂದ ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಎದುರಾಗಿದೆ.
  ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಸ್ತೆಯಲ್ಲಿ ಅಳವಡಿಸಿರುವ ರೋಡ್ ಹಂಪ್ಸ್‌ಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಸುರೇಶಕುಮಾರ ಟಿ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
  ಪ್ರಮುಖರಾದ ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ಎಸ್.ಡಿ. ಹಿರೇಮಠ, ಹರಿಹರಗೌಡ ಪಾಟೀಲ, ಪರ್ವತಗೌಡ ಕುಸಗೂರು, ಕೆ.ಬಿ. ಬಣಕಾರ, ರಾಜು ಕೋರೆರ, ಮಂಜಣ್ಣ ಮೆಣಸಿನಹಾಳ, ಮಂಜು ಶಿವಲಿಂಗಪ್ಪನವರ, ಇಂದ್ರಮ್ಮ ಕಮ್ಮಾರ, ರೇಣುಕಾ ಲಮಾಣಿ, ಶೈಲಾ ಅಂಗಡಿ, ಕವಿತಾ ಕೂಸನೂರ, ಪುಷ್ಪಾ ಅಂಗಡಿ, ಗುರುನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts