More

    ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡ ಚಿರತೆ

    ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ಹೆಣ್ಣು ಚಿರತೆಯೊಂದು ತಪ್ಪಿಸಿಕೊಂಡು ಪಕ್ಕದ ಗ್ವಾಲಿಯರ್, ಮೊರೆನಾ ಕಾಡಿಗೆ ತಲುಪಿದ್ದು, ಅರಣ್ಯದಂಚಿನ ಗ್ರಾಮಗಳ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

    ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತದ ವಶಕ್ಕೆ: ಅಮಿತ್ ಷಾ ಭರವಸೆ

    ವೀರಾ ಹೆಸರಿನ ಹೆಣ್ಣು ಚೀರಾ ಮೇಕೆಯನ್ನು ಭೇಟೆಯಾಡುತ್ತಾ ಗ್ವಾಲಿಯರ್ ತಲುಪಿದೆ. ಗ್ವಾಲಿಯಾರ್ ಮತ್ತು ಮೊರೆನಾ ಅರಣ್ಯದ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ಜಾನುವಾರುಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಚಿರತೆ ರಾಷ್ಟ್ರೀಯ ಉದ್ಯಾನವನಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಮೇ 4 ರಂದು ಪವನ್ ಎಂಬ ಗಂಡು ಚಿರತೆ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡು ರಾಜಸ್ಥಾನದ ಕರೋಲಿ ಜಿಲ್ಲೆಗೆ ತಲುಪಿತ್ತು. ಅದನ್ನು ರಕ್ಷಿಸಿ ವಾಪಸ್ ಕರೆತರಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಚೀತಾ ಮರುಪರಿಚಯ ಯೋಜನೆಯಡಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದ ಚಿರತೆಗಳನ್ನು ಸೆಪ್ಟೆಂಬರ್ 17, 2022 ರಂದು ಕೊನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಫೆಬ್ರವರಿ 2023 ರಲ್ಲೂ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ತರಲಾಗಿತ್ತು. ಭಾರತದ ನೆಲದಲ್ಲಿ ಜನಿಸಿದ 14 ಮರಿಗಳು ಸೇರಿದಂತೆ ಕೆಎನ್‌ಪಿಯಲ್ಲಿ ಈಗ 27 ಚಿರತೆಗಳಿವೆ.

    IPL 2024: ಆರ್​ಸಿಬಿ ಬಸ್​ಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಅಭಿಮಾನಿ!: ಬಸ್​ನಲ್ಲಿದ್ದ ಆಟಗಾರರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts