

ಮುಂಬೈ: ಕಳೆದ ಶುಕ್ರವಾರದ ವಹಿವಾಟಿನಲ್ಲಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್‌ನ ಷೇರುಗಳ ಬೆಲೆಯಲ್ಲಿ 5% ವರೆಗೆ ಏರಿಕೆ ಕಂಡುಬಂದಿದೆ.
ಶುಕ್ರವಾರ ಈ ಷೇರು 20.40 ರೂ.ಗೆ ತಲುಪಿತ್ತು. ಈ ಬೆಲೆಯಲ್ಲಿ, ಪೆನ್ನಿ ಸ್ಟಾಕ್ ತನ್ನ ಒಂದು ವರ್ಷದ ಕನಿಷ್ಠ ರೂ 5.17 ರಿಂದ ಶೇಕಡಾ 266 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಇದರ 52 ವಾರಗಳ ಗರಿಷ್ಠ ಬೆಲೆ ರೂ 23.99 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 13,645.24 ಕೋಟಿ ರೂ. ಇದೆ.
ಈ ವರ್ಷ ಇಲ್ಲಿಯವರೆಗೆ, ಈ ಷೇರುಗಳ ಬೆಲೆ 40% ವರೆಗೆ ಲಾಭ ನೀಡಿದೆ. ಒಂದು ವರ್ಷದಲ್ಲಿ ಶೇ. 250ರಷ್ಟು ಏರಿಕೆ ಕಂಡಿದೆ.
ಈ ಷೇರುಗಳ ಕಳೆದ ಐದು ವರ್ಷಗಳಲ್ಲಿ 680.39% ರಷ್ಟು ಬಲವಾದ ಏರಿಕೆ ದಾಖಲಿಸಿವೆ. ಈ ಅವಧಿಯಲ್ಲಿ ಈ ಷೇರು ಬೆಲೆ 2 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ. ದೀರ್ಘಾವಧಿಯಲ್ಲಿ ಈ ಷೇರು ಕೂಡ ಭಾರಿ ನಷ್ಟವನ್ನು ಅನುಭವಿಸಿದೆ. 2007ರಲ್ಲಿ ಈ ಷೇರಿನ ಬೆಲೆ 136 ರೂ. ಇತ್ತು. ಅಲ್ಲಿಂದ ಇದುವರೆಗೆ ಈ ಷೇರು ಬೆಲೆ ಶೇ. 85ರಷ್ಟು ಕುಸಿದಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್‌ನ ಏಕೀಕೃತ ನಿವ್ವಳ ಲಾಭ 588.79 ಕೋಟಿ ರೂ. ಆಗಿದೆ. ಈ ಕಂಪನಿಯ ಲಾಭವು ಮುಖ್ಯವಾಗಿ ಆದಾಯದ ಹೆಚ್ಚಳದಿಂದ ಹೆಚ್ಚಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 43.99 ಕೋಟಿ ರೂ.ಗಳ ಏಕೀಕೃತ ನಿವ್ವಳ ನಷ್ಟವನ್ನು ಕಂಪನಿ ಅನುಭವಿಸಿತ್ತು. 2024ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 1,863.63 ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಗೆ ಹೋಲಿಸಿದರೆ, ಇದು ಶೇಕಡಾ 1,385.41 ಹೆಚ್ಚಳವಾಗಿದೆ.
2023-24ರ ಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭವು 1,021.95 ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2022-23 ರಲ್ಲಿ ಇದು 55.42 ಕೋಟಿ ರೂ. ಇತ್ತು. 2023-24 ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 7,151.29 ಕೋಟಿ ರೂ.ಗೆ ಏರಿಕೆಯಾಗಿದ್ದು, ವರ್ಷದ ಹಿಂದೆ 5,922.15 ಕೋಟಿ ರೂ. ಇತ್ತು.