ಬಾಲಕನನ್ನು ಕೆರೆಯೊಳಗೆ ಎಳೆದೊಯ್ದ ಆಕಳು! 12 ವರ್ಷದ ಬಾಲಕ ದುರ್ಮರಣ

ಬುಯ
Published on

ಹಾವೇರಿ: ಆಕಳಿನ ಮೈ ತೊಳೆಸಲೆಂದು ಕೆರೆಗೆ ಹೋದ ಬಾಲಕ ಅಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲೆಯ ಹಿರಕೇರೂರ ತಾಲೂಕಿನ ಹಂಸಬಾವಿಯಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಪವನ್​ ​ಸೋಮವಾರದಂದು ಆಕಳ ಮೈ ತೊಳೆಸಲೆಂದು ದುರ್ಗಾದೇವಿ ಕೆರೆಗೆ ಹೋಗಿದ್ದ. ಆ ವೇಳೆ ಆಕಳು ಬಾಲಕನನ್ನು ಕೆರೆಯೊಳಗೆ ಎಳೆದೊಯ್ದಿದೆ. ಆಕಳನ್ನು ಬಿಡದ ಬಾಲಕ ಕೆರೆಯ ನೀರಿಗೆ ಬಿದ್ದಿದ್ದು, ಸಾವನ್ನಪ್ಪಿದ್ದಾನೆ. ಬಾಲನ ತಲೆ ಮತ್ತು ಮುಖ ಭಾಗದಲ್ಲಿ ಕೆಲ ಗಾಯಗಳೂ ಆಗಿರುವುದಾಗಿ ಹೇಳಲಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಮುಳುಗು ತಜ್ಞರು ಬಂದಿದ್ದು, ಬಾಲಕನ ಮೃತ ದೇಹವನ್ನು ಹೊರತೆಗೆಯಲಾಗಿದೆ. ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net