

ಉತ್ತರ: ನಿಮ್ಮ ಮಗಳಿಗೆ ಈಗ ಬೆಳವಣಿಗೆಯ ವಯಸ್ಸು ಇರುವುದರಿಂದ ಎಲ್ಲ ಬಗೆಯ ಪೋಷಕಾಂಶವುಳ್ಳ ಆಹಾರ
ನೀಡಿ. ಸೊಪ್ಪು, ತರಕಾರಿ, ಮೊಳಕೆಕಾಳು, ಹಾಲು, ಮೊಸರು, ತುಪ್ಪ ಎಲ್ಲವನ್ನೂ ಡಬೇಕು. ಅಲ್ಲದೇ ಪ್ರತಿದಿನ ಒಂದು ಘಂಟೆ ಆಟ ಇಲ್ಲವೇ ವ್ಯಾಯಾಮ ಡಲು ಹೇಳಿ. ಮಾನಸಿಕವಾಗಿ ಧೈರ್ಯವಾಗಿ ಎಲ್ಲವನ್ನೂ ಎದುರಿಸುವ ಬಗೆ ತಿಳಿಸಬೇಕು.
ಪ್ರತಿ ತಿಂಗಳೂ ಋತುಸ್ರಾವ ಅಧಿಕವಾಗುತ್ತಿದ್ದಲ್ಲಿ, ಅಧಿಕ ಹೊಟ್ಟೆನೋವಿದ್ದಲ್ಲಿ ಇಲ್ಲವೇ ನಿಯಮಿತವಾಗಿ ಮುಟ್ಟು ಬಾರದಿದ್ದಲ್ಲಿ ಮಾತ್ರ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು. ಈಗಷ್ಟೇ ಒಂದು ತಿಂಗಳಾಗಿದೆ. ಒಂದು ವರ್ಷದೊಳಗೆ ಋತುಚಕ್ರ ಸರಿಯಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ: