More

    ಸುಡುವ ಬಿಸಿಲಲ್ಲಿ ಅನಗತ್ಯ ಹೊರಹೋಗದಿರಿ

    ಆರೋಗ್ಯ ರಕ್ಷಿಸಿಕೊಳ್ಳಲು ಉಡುಪಿ ಜಿಲ್ಲಾಡಳಿತ ಸೂಚನೆ — ಸಾರ್ವಜನಿಕರಿಗಾಗಿ 102 ಸಹಾಯವಾಣಿ

    ಉಡುಪಿ: ಅತಿಯಾದ ಉಷ್ಣತೆ ಮತ್ತು ಬಿಸಿಗಾಳಿಯಿಂದ ಆಗುವ ತೊಂದರೆಯಿಂದ ಪಾರಾಗಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಉಡುಪಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಕೆಲ ಸಲಹೆ, ಸೂಚನೆ ನೀಡಿದೆ.
    ಬಾಯಾರಿಕೆ ಇಲ್ಲದಿದ್ದರೂ ಸಹ ಆಗಾಗ ಹೆಚ್ಚು ನೀರು ಕುಡಿಯುವುದು, ಒಆರ್​ಎಸ್​, ಎಳನೀರು ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ಲಿಂಬು ಶರಬತ್​, ಹಣ್ಣಿನ ರಸ, ಮಜ್ಜಿಗೆ/ಲಸ್ಸಿಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಸೇವಿಸಬೇಕು. ಇದಲ್ಲದೆ, ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣು, ತರಕಾರಿ ಸೇವಿಸುವುದು ಸೂಕ್ತ ಎಂದು ಸಲಹೆ ನೀಡಿದೆ.

    ಟೋಪಿ, ಕನ್ನಡಕ ಧರಿಸಿ

    ತಿಳಿಬಣ್ಣದ ಸಡಿಲವಾದ ಹತ್ತಿ ಬಟ್ಟೆ, ಗಾಳಿಯಾಡುವ ಪಾದರಕ್ಷೆ ಧರಿಸಿದರೆ ಉತ್ತಮ. ಬಿಸಿಲಿನಲ್ಲಿ ಹೊರಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್​, ತಂಪು ಕನ್ನಡಕ ಬಳಸಬೇಕು. ಸಾಧ್ಯವಾದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಹೊರಾಂಗಣ ಚಟುವಟಿಕೆ ಯೋಜಿಸಿಕೊಳ್ಳುವುದು ಸೂಕ್ತ. ಮಧ್ಯಾಹ್ನ 12ರಿಂದ 4 ಗಂಟೆಯವರೆಗಿನ ಬಿಸಿಲಿನಲ್ಲಿ ಓಡಾಡುವುದು ಆದಷ್ಟು ತಪ್ಪಿಸಬೇಕು. ಮನೆಯಲ್ಲಿ ಕಿಟಕಿ ಪರದೆ, ಫ್ಯಾನ್​, ಕೂಲರ್​ ಅಥವಾ ಎಸಿ (ಸೌಲಭ್ಯ ಉಳ್ಳವರು) ಬಳಸಬಹುದು.

    ಹಿರಿಯರ ಗಮನ ನೀಡಿ

    ನವಜಾತ ಶಿಶುಗಳು ಮತ್ತು ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು, ಹೃದ್ರೋಗ ಹಾಗೂ ರಕ್ತದ ಒತ್ತಡಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು ಆರೋಗ್ಯದತ್ತ ಹೆಚ್ಚು ಗಮನ ನೀಡಬೇಕು. ಬಿಸಿಲ ಪ್ರಖರತೆ ಹೆಚ್ಚಿರುವ ಅವಧಿಯಲ್ಲಿ ಚಿಕ್ಕ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬಾರದು. ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ಮದ್ಯಪಾನ, ಕಾಫಿ, ಟೀ, ಕಾಬೋರ್ನೇಟೆಡ್​ ಪಾನೀಯಗಳಿಂದ ದೂರವಿರಬೇಕು.

    ಮಾಹಿತಿಗಾಗಿ 102 ಸಹಾಯವಾಣಿ

    ಬಿಸಿಲು ಹೆಚ್ಚಿರುವುದರಿಂದ ಕುದಿಸಿದ ನೀರು ಸ್ನಾನ ಮಾಡುವ ಬದಲು ತಣ್ಣೀರಿನಲ್ಲೇ ಸ್ನಾನ ಮಾಡಬೇಕು. ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆ ಸುತ್ತು ಬರುವುದು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತದಲ್ಲಿ ಏರುಪೇರು, ವಾಕರಿಕೆ ಅಥವಾ ವಾಂತಿಯಾಗುವುದು ಆದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯಬೇಕು. ತುರ್ತು ಸಂದರ್ಭದಲ್ಲಿ ಇದ್ದಲ್ಲಿ 108ಕ್ಕೆ ಕರೆ ಮಾಡಬೇಕು. ಅಗತ್ಯ ಮಾಹಿತಿಗಾಗಿ 102 ಸಹಾಯವಾಣಿ ಸಂಪರ್ಕಿಸಬಹುದು. ಕಳೆದ ಒಂದು ವಾರದಿಂದ ಬಿಸಿಲ ತಾಪ ಏರುತ್ತಲೇ ಇದ್ದು, ಬಿಸಿಲು ಹೆಚ್ಚಿರುವುದರಿಂದ ಕುದಿಸಿದ ನೀರು ಸ್ನಾನ ಮಾಡುವ ಬದಲು ತಣ್ಣೀರಿನಲ್ಲೇ ಸ್ನಾನ ಮಾಡಬೇಕು. ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆ ಸುತ್ತು ಬರುವುದು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತದಲ್ಲಿ ಏರುಪೇರು, ವಾಕರಿಕೆ ಅಥವಾ ವಾಂತಿಯಾಗುವುದು ಆದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯಬೇಕು. ತುರ್ತು ಸಂದರ್ಭದಲ್ಲಿ ಇದ್ದಲ್ಲಿ 108ಕ್ಕೆ ಕರೆ ಮಾಡಬೇಕು. ಅಗತ್ಯ ಮಾಹಿತಿಗಾಗಿ 102 ಸಹಾಯವಾಣಿ ಸಂಪರ್ಕಿಸಬಹುದು.

    ಡೆಂಘೆ ಜ್ವರ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡಿ

    ಜಿಲ್ಲೆಯಲ್ಲಿ ಡೆಂ ಜ್ವರವೂ ಹರಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜ್ವರ ಬಂದ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಘೆ ಹರಡುವ ಈಡಿಸ್​ ಸೊಳ್ಳೆ ನಿಯಂತ್ರಿಸಲು ಮನೆಯ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಿಸುವ ತೊಟ್ಟಿ, ಡ್ರಂ, ಬ್ಯಾರೆಲ್​ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿ ಮುಚ್ಚಿಡಬೇಕು. ಟೈರ್​, ಟ್ಯೂಬ್​, ತೆಂಗು ಮತ್ತು ಎಳನೀರಿನ ಚಿಪ್ಪುಗಳು, ಅನುಪಯುಕ್ತ ಪ್ಲಾಸ್ಟಿಕ್​ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಫ್ರೀಜ್, ಕೂಲರ್​, ಹೂವಿನಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಸೂರ್ಯನ ತಾಪ ಹೆಚ್ಚಾಗುತ್ತಿದ್ದು, ಹೀಟ್​ ವೇವ್​ ಸ್ಟ್ರೋಕ್ ನಿಂದಾಗಿ ಕಾರ್ಮಿಕರ ಆರೋಗ್ಯಕ್ಕೂ ತೊಂದರೆ ಆಗಬಹುದು. ಹೀಗಾಗಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಇತರ ಎಲ್ಲ ಕೆಲಸಗಾರರು ಆರೋಗ್ಯದತ್ತ ಗಮನ ನೀಡಬೇಕು. ಮಾಲೀಕರು ತಮ್ಮ ಕೆಲಸಗಾರರ ರಕ್ಷಣೆಗೆ ಅಗತ್ಯ ರಕ್ಷಣಾ ಕ್ರಮ ಅನುಸರಿಸಲೇಬೇಕು.

    ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts